ಇಸ್ಲಾಮಾಬಾದ್: ಅಚ್ಚರಿಯ ಬೆಳವಣಿಗೆ ಎಂಬಂತೆ ಭಾರತ, ಅಮೆರಿಕ ಬಳಿಕ ಇದೀಗ ಪಾಕಿಸ್ತಾನದಲ್ಲೂ ಚೀನಿ ಮೂಲದ ಟಿಕ್ ಟಾಕ್ ಆ್ಯಪ್ ಬ್ಯಾನ್ ಮಾಡಲಾಗಿದೆ.
ಈ ಕುರಿತು ಪಾಕ್ ಮಾಧ್ಯಮಗಳು ವರದಿ ಮಾಡಿದ್ದು, ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ(ಪಿಟಿಎ) ಚೀನಿ ಆ್ಯಪ್ ಟಿಕ್ ಟಾಕ್ ನಿಷೇಧಿಸಲಾಗಿದೆ ಎಂದು ತಿಳಿಸಿವೆ. ಕಾನೂನು ಬಾಹಿರ, ಅಶ್ಲೀಲತೆ ಮತ್ತು ಅನೈತಿಕ ವಿಡಿಯೋಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಬ್ಯಾನ್ ಮಾಡಿರುವುದಾಗಿ ಪಾಕಿಸ್ತಾನ ತಿಳಿಸಿದೆ.
Advertisement
Advertisement
ಟಿಕ್ ಟಾಕ್ ನಿಷೇಧಕ್ಕೆ ಕಾರಣ ನೀಡಿರುವ ಪಿಟಿಎ, ಕಾನೂನು ಬಾಹಿರ, ಅಶ್ಲೀಲತೆ ಮತ್ತು ಅನೈತಿಕ ವಿಡಿಯೋಗಳ ಕುರಿತು ಅಸಂಖ್ಯ ದೂರುಗಳು ಬಂದಿವೆ. ಹಲವು ಬಾರಿ ಈ ಕುರಿತು ನೋಟಿಸ್ ನೀಡಿದರೂ ಸಹ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ ಟಿಕ್ ಟಾಕ್ ನಿಷೇಧ ಮಾಡಲಾಗಿದೆ. ಅಸಂಖ್ಯ ದೂರುಗಳು ಬಂದ ಹಿನ್ನೆಲೆ ಹಾಗೂ ವಿಡಿಯೋ ಕಂಟೆಂಟ್‍ಗಳನ್ನು ಆಧರಿಸಿ ಪಾಕಿಸ್ತಾನ ಹಲವು ಬಾರಿ ನೋಟಿಸ್ ನೀಡತ್ತು. ಅಲ್ಲದೆ ಈ ಹಿಂದೆ ಅಂತಿಮ ನೋಟಿಸ್ ಸಹ ಜಾರಿ ಮಾಡಿತ್ತು. ಆದರೆ ಟಿಕ್ ಟಾಕ್ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ ಎಂಬ ಕಾರಣವನ್ನು ಪಾಕಿಸ್ತಾನ ನೀಡಿದೆ.
Advertisement
Advertisement
ಟಿಕ್‍ಟಾಕ್ ದೇಶದ ಭದ್ರತೆಗೆ ಸಮಸ್ಯೆ ತರಬಹುದು ಎಂಬ ವಿಚಾರ ಪಾಕಿಸ್ತಾನಕ್ಕೆ ಗೊತ್ತಾಗಿದೆ. ಹೀಗಾಗಿ ಈ ವಿಚಾರವನ್ನು ಪ್ರಸ್ತಾಪ ಮಾಡದೇ ಹಿಂಬಾಗಿಲಿನ ಮೂಲಕ ಟಿಕ್‍ಟಾಕ್ ನಿಷೇಧ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
ಟಿಕ್‍ಟಾಕ್ ಅಶ್ಲೀಲ ವಿಡಿಯೋಗಳನ್ನು ನಿಯಂತ್ರಣ ಮಾಡಬೇಕು. ಈ ಕುರಿತು ಸೂಕ್ತ ಕಾರ್ಯತಂತ್ರ ರೂಪಿಸಬೇಕು ಎಂದು ಈ ಹಿಂದೆ ಹಲವು ಬಾರಿ ಪಿಟಿಎ ನೋಟಿಸ್ ನೀಡಿತ್ತು. ಅಲ್ಲದೆ ಕೊನೇಯದಾಗಿ ಜುಲೈನಲ್ಲಿ ಮತ್ತೆ ಅಂತಿಮ ನೋಟಿಸ್ ನೀಡಿ ಎಚ್ಚರಿಸಿತ್ತು. ಆದರೂ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಇದೀಗ ಪಾಕಿಸ್ತಾನ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ.
ಪಾಕಿಸ್ತಾನದಲ್ಲಿ ಟಿಕ್‍ಟಾಕ್ ಜನಪ್ರಿಯವಾಗಿದ್ದು 2.5 ಕೋಟಿ ಜನ ಕಳೆದ ವರ್ಷ ಈ ಅಪ್ಲಿಕೇಶನ್‍ನ್ನು ಡೌನ್‍ಲೋಡ್ ಮಾಡಿದ್ದಾರೆ. ಈ ಹಿಂದೆ ಟಿಕ್‍ಟಾಕ್ ವಿಡಿಯೋಕ್ಕಾಗಿ ಯುವಕನೊಬ್ಬ ಶೂಟ್ ಮಾಡಿಕೊಂಡಿದ್ದ. 10 ದಿನಗಳ ಹಿಂದೆ ಟಿಕ್‍ಟಾಕ್ ಮೂಲಕ ಪರಿಚಯಗೊಂಡಿದ್ದ ವ್ಯಕ್ತಿ ಮತ್ತು ಆತನ ಸ್ನೇಹಿತರಿಂದ ಹುಡುಗಿಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಅಪರಾಧಗಳಿಗೆ ಪ್ರೇರಣೆ ನೀಡುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್ ಶಾಸನಸಭೆ ಜುಲೈ 6 ರಂದು ಟಿಕ್‍ಟಾಕ್ ನಿಷೇಧ ನಿರ್ಣಯವನ್ನು ಪಾಸ್ ಮಾಡಿತ್ತು. ಇದೀಗ ಪಾಕಿಸ್ತಾನ ಟಿಕ್ ಆ್ಯಪ್‍ನ್ನು ನಿಷೇಧ ಮಾಡಿದೆ.
ಎಲೆಕ್ಟ್ರಾನಿಕ್ ಅಪರಾಧಗಳ ತಡೆಗಟ್ಟುವಿಕೆ ಕಾಯ್ದೆಯಡಿ ಲೈವ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಬಿಗೋವನ್ನು ಸಹ ಈ ಹಿಂದೆ ಪಾಕಿಸ್ತಾನ ನಿರ್ಬಂಧಿಸಿತ್ತು. ಇದಾದ ಬಳಿಕ ಇದೀಗ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಟಿಕ್ ಟಾಕ್ ಬ್ಯಾನ್ ಮಾಡಿದೆ.