– ಪ್ರಧಾನಿ ಮೋದಿಯನ್ನ ಹೊಗಳಿದ ದೀದಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜನತೆಗೆ ಕೋವಿಡ್-19 ಲಸಿಕೆಗಳನ್ನು ಉಚಿತವಾಗಿ ವಿತರಿಸುವುದಾಗಿ ಭಾನುವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಈ ಕುರಿತಂತೆ ಸರ್ಕಾರ ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ. ನಮ್ಮ ಸರ್ಕಾರವು ರಾಜ್ಯದಲ್ಲಿನ ಜನರಲ್ಲಿ ಹಣ ಪಡೆಯದೇ ಉಚಿತವಾಗಿ ಕೋವಿಡ್-19 ಲಸಿಕೆ ವಿತರಿಸುತ್ತಿದೆ ಎಂದು ಹೇಳಲು ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಹಿಂದೆ ಕೇರಳ, ತಮಿಳುನಾಡು ಮಧ್ಯ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಜನರಿಗೆ ಉಚಿತ ಲಸಿಕೆ ವಿತರಿಸುವುದಾಗಿ ಘೋಷಿಸಿದ್ದವು.
Advertisement
ಭಾರತವು ಕೋವಿಡ್-19 ವ್ಯಾಕ್ಸಿಲೇಷನ್ ಡ್ರೈ ರನ್ ನನ್ನು ಜನವರಿ 16ರಿಂದ ದೇಶಾದ್ಯಂತ ವಿತರಿಸಲು ಆರಂಭಿಸುವುದಾಗಿ ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರ ಸರ್ಕಾರ ತಿಳಿಸಿತ್ತು. ಲಸಿಕೆ ವಿತರಣೆಯ ಮೊದಲ ಹಂತದಲ್ಲಿ 3 ಕೋಟಿ ಕಾರ್ಮಿಕರಿಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ನಂತರ 50 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 27 ಕೋಟಿ ಜನರಿಗೆ ಮತ್ತು ಸಹ ಅಸ್ವಸ್ಥತೆ ಹೊಂದಿರುವವರಿಗೆ ಲಸಿಕೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.
Advertisement
Advertisement
ಇನ್ನೂ ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಪ್ರಧಾನಿ ಮೋದಿಯವರು ಹೆಗ್ಗುರುತಿನ ಹೆಜ್ಜೆ ದೊಡ್ಡ ಮಟ್ಟದಲ್ಲಿದೆ ಎಂದು ಶ್ಲಾಘಿಸಿದರು. ಈ ಮುನ್ನ ಲಸಿಕೆಯಲ್ಲಿ ಯಾವುದಾದರೂ ಲೋಪದೋಷವಿದೆಯಾ ಎಂದು ಕಂಡುಹಿಡಿಯಲು ಭಾರತ ನಕಲಿ ವ್ಯಾಕ್ಸಿನೇಷನ್ ಡ್ರೈ ರನ್ ಗಳ ಪರೀಕ್ಷೆ ನಡೆಸಿದ್ದವು ಎಂದರು.
Advertisement
ಭಾನುವಾರ 8 ಗಂಟೆಯಷ್ಟರಲ್ಲಿ ಭಾರತದಲ್ಲಿ 24 ಗಂಟೆಯೊಳಗೆ 18,645 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.4 ಕೋಟಿಗೆ ತಲುಪಿದೆ. ಸಕ್ರಿಯ ಪ್ರಕರಣಗಳು 2.33 ಲಕ್ಷಕ್ಕೆ ಇಳಿದಿದೆ. ಅಲ್ಲದೆ ಸೋಂಕಿನಿಂದ ಚೇತರಿಕೊಳ್ಳುತ್ತಿರುವವರ ಸಂಖ್ಯೆ ಕೂಡ 1,00,75,950ಕ್ಕೆ ಏರಿಕೆಯಾಗಿದೆ. ಶನಿವಾರ 201 ಜನರು ಮೃತಪಟ್ಟಿರುವುದು ವರದಿಯಲ್ಲಿ ತಿಳಿದು ಬಂದಿದೆ. ಶನಿವಾರ ಕೇರಳದಲ್ಲಿ 5,528 ಹೊಸ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 3,581 ಪ್ರಕರಣಗಳು ದಾಖಲಾಗಿವೆ.