ಕೋಲ್ಕತ್ತಾ: ಮಾಹಾಮಾರಿ ಕೊರೊನಾ ತಡೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ಜುಲೈ 31ರವರೆಗೆ ಕೆಲವು ಸಡಿಲಿಕೆಗಳೊಂದಿಗೆ ಲಾಕ್ಡೌನ್ ಮಾಡಿ ಆದೇಶಿಸಿದೆ. ಈ ಲಾಕ್ಡೌನ್ ನಲ್ಲಿ ಕೆಲವು ವಿನಾಯ್ತಿಗಳು ಲಭ್ಯವಾಗಲಿದೆ ಎಂದು ಮಮತಾ ಬ್ಯಾನರ್ಜಿ ಸರ್ಕಾರ ಸ್ಪಷ್ಟಪಡಿಸಿದೆ. ಶೀಘ್ರದಲ್ಲಿಯೇ ಲಾಕ್ಡೌನ್ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತದೆ.
ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ದೇಶದಲ್ಲಿ ಲಾಕ್ಡೌನ್ ಬೇಕು ಅಥವಾ ಬೇಡ ಎಂಬುದರ ಕುರಿತ ಚರ್ಚೆಗಳು ಮುನ್ನಲೆಗೆ ಬಂದಿವೆ. ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳು ಇನ್ನು ಕಠಿಣ ಲಾಕ್ಡೌನ್ ನಿಯಮಗಳನ್ನು ಪಾಲಿಸುತ್ತಿದೆ. ಇದೀಗ ಪಶ್ಚಿಮ ಬಂಗಾಳ ಸರ್ಕಾರ ಲಾಕ್ಡೌನ್ ಮಾಡುವ ಕುರಿತ ತನ್ನ ನಿರ್ಧಾರವನ್ನು ಪ್ರಕಟಿಸಿದೆ.
Advertisement
Lockdown in the state extended till 31st July with certain relaxations: West Bengal Government pic.twitter.com/utW4X2u6oT
— ANI (@ANI) June 24, 2020
Advertisement
ದೇಶದಲ್ಲಿ ಇದುವರೆಗೂ 4,56,183 ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, 1,83,022 ಸಕ್ರಿಯ ಕೇಸ್ ಗಳಿವೆ. ಭಾರತದಲ್ಲಿ ಡೆಡ್ಲಿ ವೈರಸ್ ಆಕ್ರಮಣಕ್ಕೆ ಒಟ್ಟು 14,476 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂದು ಕರ್ನಾಟಕದಲ್ಲಿ ಕೊರೊನಾ 10 ಸಾವಿರದ ಗಡಿ ದಾಟಿದ್ದು, 164 ಜನರು ಸಾವನ್ನಪ್ಪಿದ್ದಾರೆ.