‘ಪರೀಕ್ಷೆ ನಡೆಸೋದಾದ್ರೆ ವಿದ್ಯಾರ್ಥಿ ಹೆಸರಿನಲ್ಲಿ 50 ಲಕ್ಷ ರೂ. ಡೆಪಾಸಿಟ್ ಇಡಿ’

Public TV
1 Min Read
Vatal e1561707033660

– ಸಿಎಂಗೆ ವಾಟಾಳ್ ನಾಗರಾಜ್ ಆಗ್ರಹ

ಚಾಮರಾಜನಗರ: ಎಸ್‍ಎಸ್‍ಎಲ್‍ಸಿ ಹಾಗೂ ಇನ್ನಿತರೇ ಪರೀಕ್ಷೆಗಳನ್ನು ಸರ್ಕಾರ ಮಾಡಲೇಬೇಕೆಂದರೇ ಪ್ರತಿಯೋರ್ವ ವಿದ್ಯಾರ್ಥಿ ಹೆಸರಿನಲ್ಲಿ 50 ಲಕ್ಷ ರೂ. ಹಾಗೂ ಶಿಕ್ಷಕರ ಹೆಸರಿನಲ್ಲಿ 25 ಲಕ್ಷ ರೂ. ಹಣ ಡೆಪಾಸಿಟ್ ಮಾಡಬೇಕು ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಇಂದು ಸಂಜೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವುದರ ವಿರುಧ್ಧ ಕೆಲಹೊತ್ತು ಪ್ರತಿಭಟಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೊರೊನಾ ಜೊತೆ ಸರಸ ಸರಿಯಲ್ಲ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಳ್ಳದೇ ಎಲ್ಲರನ್ನೂ ಉತ್ತೀರ್ಣಗೊಳಿಸಬೇಕು. ಪರೀಕ್ಷೆ, ಪಾಸ್‍ಗಿಂತ ಜೀವವೇ ಮುಖ್ಯ ಎಂದು ಒತ್ತಾಯಿಸಿದರು.

SSLC STUDENTS 1

ಶಾಲಾ ಶುಲ್ಕದ ಹೊಣೆಯನ್ನು ಸರ್ಕಾರವೇ ಹೊರಬೇಕು. ಜೆಡಿಎಸ್, ಕಾಂಗ್ರೆಸ್, ಬಿಜೆಪಿಯ ಮುಖಂಡರು ನಡೆಸುವ ಶಾಲೆಗಳಲ್ಲಿ ಶುಲ್ಕ ವಸೂಲಿ ಮೊದಲು ನಿಲ್ಲಿಸಬೇಕು. ಪಾಲಕರಿಂದ ಯಾವುದೇ ರೀತಿ ಶುಲ್ಕ ಪಡೆಯಬಾರದೆಂದು ಒತ್ತಾಯಿಸಿ ಗುರುವಾರ ವಿಧಾನಸೌಧದ ಎದುರು ಏಕಾಂಗಿಯಾಗಿ ಮಲಗಿ ಪ್ರತಿಭಟಿಸುತ್ತೇನೆ ಎಂದು ತಿಳಿಸಿದರು.

Share This Article