ಬೆಂಗಳೂರು: ಸಂಪರ್ಕಿತರನ್ನು ಕೂಡಲೇ ಪರೀಕ್ಷಿಸಿದರೆ ಪಕ್ಕಾ ರಿಸಲ್ಟ್ ಗೊತ್ತೇ ಆಗಲ್ಲವಂತೆ. ಸಂಪರ್ಕಿತರನ್ನು ಪರೀಕ್ಷೆ ನಡೆಸಿದರೆ ನೆಗೆಟಿವ್ ಬರುವ ಸಾಧ್ಯತೆಯೇ ಹೆಚ್ಚು ಎಂದು ಕೊರೊನಾ ಸೋಂಕು ಪರೀಕ್ಷೆ ಸಂಬಂಧ ಹೊಸ ಅಧ್ಯಯನ ವರದಿಯಲ್ಲಿ ಬೆಚ್ಚಿಬೀಳಿಸುವ ಅಂಶ ಬಯಲಾಗಿದೆ.
Advertisement
ತಕ್ಷಣ ಪರೀಕ್ಷೆ ಮಾಡಿದರೆ ನೆಗೆಟಿವ್ ಬರುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಇನ್ನಷ್ಟು ಅನಾಹುತ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸನ್ ಜನರಲ್ನಲ್ಲಿ ಸಂಶೋಧನಾ ವರದಿಯಲ್ಲಿ ಪ್ರಕಟವಾಗಿದೆ.
Advertisement
ಸೋಂಕಿತರ ಸಂಪರ್ಕದಲ್ಲಿದ್ದ ವ್ಯಕ್ತಿಗೆ ರೋಗದ ಗುಣಲಕ್ಷಣಗಳು ಕಾಣಿಸಿಕೊಂಡರೆ ಮಾತ್ರ ಪರೀಕ್ಷೆ ನಡೆಸಬೇಕು. ರೋಗದ ಲಕ್ಷಣಗಳು ಕಾಣಿಸಿಕೊಂಡ 3 ದಿನಗಳ ಬಳಿಕ ಕೊರೊನಾ ಟೆಸ್ಟ್ ಮಾಡುವುದು ಉತ್ತಮ. 3 ದಿನದ ನಂತರ ಟೆಸ್ಟ್ ಮಾಡಿದ್ರೆ ನಿಖರವಾದ ರಿಸಲ್ಟ್ ಪಡೆಯಬಹುದು ಎಂದು ಆರ್ಟಿ-ಪಿಸಿಆರ್ ದತ್ತಾಂಶ ಆಧರಿಸಿ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.
Advertisement