– ಸಭಾಧ್ಯಕ್ಷದ ಮುಂದಿನ ಗಾಜು ಕಿತ್ತು ಹಾಕಿದ ಕಾಂಗ್ರೆಸ್ ಸದಸ್ಯರು
– ಸಭಾಪತಿಗಳ ಪೀಠ ಸುತ್ತುವರಿದ ಸದಸ್ಯರು
ಬೆಂಗಳೂರು: ವಿಧಾನ ಪರಿಷತ್ ಕಲಾಪ ಹೈ ಡ್ರಾಮಾಗೆ ಸಾಕ್ಷಿಯಾಗಿದ್ದು, ಕಾಂಗ್ರೆಸ್, ಬಿಜೆಪಿ ಸದಸ್ಯರು ಪರಸ್ಪರ ಎಳೆದಾಡುವ ಮೂಲಕ ದುರ್ವರ್ತನೆ ತೋರಿದ್ದಾರೆ. ಅಲ್ಲದೆ ಕಾಂಗ್ರೆಸ್ ಸದಸ್ಯರು ಸಭಾಂಗಣದ ಬಾಗಿಲು ಒದ್ದು, ಸಭಾಪತಿ ಮುಂದಿನ ಗಾಜನ್ನು ಕಿತ್ತು ಹಾಕಿದ್ದಾರೆ.
Advertisement
ಪರಿಷತ್ ಅಧಿವೇಶನ ಆರಂಭವಾಗುವ ಕುರಿತು ಬೆಲ್ ಆಗುತ್ತಿದ್ದಂತೆ ಉಪ ಸಭಾಪತಿ ಧರ್ಮೇಗೌಡ ಅವರು ಬಂದು ಕುಳಿತರು. ಇದಕ್ಕೆ ಕಾಂಗ್ರೆಸ್ ಸದ್ಯಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಪೀಠದ ಮುಂದೆ ಎರಡು ಪಕ್ಷದ ನಾಯಕರ ಗೊಂದಲ ಸೃಷ್ಟಿಸಿದ್ದು, ಪರಸ್ಪರ ಎಳೆದಾಡಿಕೊಂಡಿದ್ದಾರೆ. ಈ ಮೂಲಕ ನಾಚಿಕೆಯಾಗುವಂತೆ ವರ್ತಿಸಿದ್ದಾರೆ. ತಳ್ಳಾಟ ನೂಕಾಟದ ಮಧ್ಯೆ ಬಿಜೆಪಿ ಸದಸ್ಯರು ಉಪ ಸಭಾಪತಿಗೆ ರಕ್ಷಣೆ ನೀಡಿದ್ದಾರೆ.
Advertisement
Advertisement
ಪೀಠದ ಮುಂದೆ ಎರಡೂ ಪಕ್ಷಗಳ ಸದಸ್ಯರು ಹೈ ಡ್ರಾಮಾ ಮಾಡಿದ್ದು, ಬಿಜೆಪಿ ಸದಸ್ಯರು ಸಭಾಪತಿ ಬರದಂತೆ ಸಭಾಂಗಣ ಬಾಗಿಲನ್ನು ಮುಚ್ಚಿದ್ದಾರೆ. ಈ ವೇಳೆ ಕಾಂಗ್ರೆಸ್ ನಜೀರ್ ಅಹಮದ್ ಬಾಗಿಲನ್ನು ಕಾಲಿನಲ್ಲಿ ಒದ್ದಿದ್ದಾರೆ. ಬಳಿಕ ಬಾಗಿಲು ತೆರೆಯಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
Advertisement
ಕಾಂಗ್ರೆಸ್, ಬಿಜೆಪಿ ಸದಸ್ಯರು ಉಪ ಸಭಾಪತಿ ಎಳೆದಾಡಿದ್ದು, ಕಾಂಗ್ರೆಸ್ನ ನಾರಾಯಣಸ್ವಾಮಿ ಉಪ ಸಭಾಪತಿಯವರನ್ನು ಎಳೆದಾಡಿದ್ದಾರೆ. ಬಳಿಕ ಮಾರ್ಷಲ್ಗಳು ಆಗಮಿಸಿದ್ದು, ಉಪ ಸಭಾಪತಿಗಳಿಗೆ ರಕ್ಷಣೆ ನೀಡಿದ್ದಾರೆ. ಬಿಜೆಪಿ ಸದಸ್ಯರು ಸಹ ಸಭಾಪತಿ ಪೀಠಕ್ಕೆ ಬರದಂತೆ ಅಡ್ಡ ನಿಂತಿದ್ದಾರೆ. ಈ ವೇಳೆ ಪೀಠದ ಮೇಲೆ ಇಬ್ಬರು ಪಕ್ಷದ ಸದಸ್ಯರು ಕುಳಿತು ಅಪಮಾನ ಮಾಡಿದ್ದಾರೆ. ಬಳಿಕ ಪೀಠದ ಮೇಲೆಯೇ ತಳ್ಳಾಟ ನೂಕಾಟ ನಡೆದಿದೆ. ಈ ವೇಳೆ ಕಾಂಗ್ರೆಸ್ ಸದಸ್ಯ ಪೀಠದ ಮೇಲೆ ಕುಳಿತಿದ್ದಾರೆ. ಉಪ ಸಭಾಪತಿ ಕುಳಿತುಕೊಳ್ಳಲು ಕಾಂಗ್ರೆಸ್ ಸದಸ್ಯರು ಅವಕಾಶ ನೀಡಿಲ್ಲ.
ಬಳಿಕ ಸಭಾಪತಿಗಳು ಆಗಮಿಸಿ ಸಭೆಯನ್ನು ಅನಿರ್ಧಿಷ್ಠಾವಧಿ ವರೆಗೆ ಮುಂದೂಡಿದ್ದಾರೆ. ಬಳಿಕವೂ ಕಾಂಗ್ರೆಸ್, ಬಿಜೆಪಿ ಸದಸ್ಯರು ಸುತ್ತುವರಿದಿದ್ದಾರೆ. ಕಲಾಪವನ್ನು ಮುಂದೂಡಿದರೂ ಸಹ ಸದಸ್ಯರು ಮಾತ್ರ ಪೀಠವನ್ನು ಬಿಡದೆ ಸುತ್ತುವರಿದ ಪ್ರಸಂಗ ನಡೆಯಿತು.