ಮಡಿಕೇರಿ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿದ್ದ ಅವ್ಯವಸ್ಥೆ ಕುರಿತು ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ರೋಗಿಯೊಬ್ಬರು ವಿಡಿಯೋ ಮಾಡಿ ಅಳಲನ್ನು ತೋಡಿಕೊಂಡಿದ್ದರು.
Advertisement
ಇದನ್ನು ಶುಕ್ರವಾರ ಪಬ್ಲಿಕ್ ಟಿವಿ ಸುದ್ದಿ ಮಾಡಿತ್ತು. ಈ ಸುದ್ದಿಯ ನಂತರ ಜಿಲ್ಲಾಡಳಿತ ಕೊನೆಗೂ ಎಚ್ಚೆತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಿ ಶುಚಿತ್ವದ ಕಡೆ ಗಮನಹರಿಸಿದೆ. ಇದಕ್ಕೆಲ್ಲ ಸಹಾಯ ಮಾಡಿದ ಪಬ್ಲಿಕ್ ಟಿಗೆ ಕೊರೊನಾ ಒಳರೋಗಿಗಳು ಧನ್ಯವಾದ ಹೇಳಿದ್ದಾರೆ.
Advertisement
Advertisement
ಅಸಮಾಧಾನ ವ್ಯಕ್ತಪಡಿಸಿದ್ದ ಸೋಂಕಿತ:
ಆಸ್ಪತ್ರೆಯಲ್ಲಿ 20 ರೋಗಿಗಳಿಗೆ ಒಂದೇ ಟಾಯ್ಲೆಟ್ ಇದ್ದು, ಕುಡಿಯಲು ಬಿಸಿ ನೀರಿಗೂ ಪರದಾಡಬೇಕಿದೆ. ದಿನಕ್ಕೆ ಎರಡು ಬಾರಿ ಮಾತ್ರ ಬಿಸಿ ನೀರನ್ನು ಕೊಡುತ್ತಿದ್ದಾರೆ. ಸ್ಯಾನಿಟೈಸರ್ ವಿತರಣೆಯಲ್ಲೂ ವ್ಯತ್ಯಾಸ ಮಾಡಲಾಗಿದೆ. ಎರಡು ಮೂರು ದಿನಗಳಾದರೂ ಸ್ಯಾನಿಟೈಸರ್ ಕೊಡುತ್ತಿಲ್ಲ. ಆಸ್ಪತ್ರೆಯಲ್ಲಿ ಇರುವುದಕ್ಕಿಂತ ಮನೆಯಲ್ಲಿದ್ದರೆ ಚೆನ್ನಾಗಿರುತ್ತಿದ್ದೆವು ಎಂದು ಮಡಿಕೇರಿಯ ಕೋವಿಡ್ ವಾರ್ಡ್‍ನಲ್ಲಿರುವ ಕೊರೊನಾ ಸೋಂಕಿತ ಅಸಮಾಧಾನ ವ್ಯಕ್ತಪಡಿಸಿದ್ದರು.