ಮುಂಬೈ: ಪತ್ನಿಯನ್ನು ಕೊಲೆಗೈದ ಆರೋಪದ ಮೇಲೆ ಯೂಟ್ಯೂಬ್ ಆರ್ಟಿಸ್ಟ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಜಿತೇಂದ್ರ ಯಾನೇ ಜೀತು ಜಾನ್ ಎಂದು ಗುರುತಿಸಲಾಗಿದೆ. ಪತ್ನಿ ಕೋಮಲ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಂಡಪ್ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದಾರೆ.
Advertisement
Advertisement
ಪೊಲೀಸರು ಮೊದಲಿಗೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಆದರೆ ಅಗರ್ವಾಲ್ ಅವರ ತಾಯಿ ಮತ್ತು ಸಹೋದರಿಯ ದೂರಿನ ನಂತರ ಜಿತೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 304 (ಅಪರಾಧ), 323 (ಸ್ವಯಂಪ್ರೇರಣೆಯಿಂದ ನೋವನ್ನುಂಟು ಮಾಡಿದ ಶಿಕ್ಷೆ), 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
Advertisement
ಕೋಮಲ್ ಅವರ ಕುಟುಂಬವು, ಜೀತು ತನ್ನ ಹೆಂಡತಿಯನ್ನು ಕೊಂದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದೆ. ಕ್ಷುಲ್ಲಕ ವಿಚಾರಗಳಿಗೆ ಸಂಬಂಧಿಸಿದಂತೆ ತನ್ನ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನು. ಕೋಮಲ್ ಅವರನ್ನು ಜೀತು ಅನೇಕ ಬಾರಿ ದೈಹಿಕವಾಗಿ ನಿಂದಿಸುತ್ತಿದ್ದು, ಅವನು ಅವಳನ್ನು ಕೊಂದಿರಬಹುದು ಎಂದು ಕೋಮಲ್ ತಾಯಿ ಮತ್ತು ಸಹೋದರಿ ಪ್ರಿಯಾ ಹೇಳಿದ್ದಾರೆ.
ಸದ್ಯ ಕೋಮಲ್ ಶವವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಳಿಕವಷ್ಟೇ ಸಾವೋ ಅಥವಾ ಆತ್ಮಹತ್ಯೆಯೋ ಎಂಬುದು ಬೆಳಕಿಗೆ ಬರಲಿದೆ.