ಹಾವೇರಿ: ಕೊರೊನಾ ಅರ್ಭಟ ಮುಂದುವರೆದಿದೆ. ಜನರು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿಕೊಂಡು ಓಡಾಡುವಂತೆ ಟಫ್ ರೂಲ್ಸ್ ಜಾರಿ ಮಾಡಿದೆ. ಪಡಿತರ ಅಕ್ಕಿ ತೆಗೆದುಕೊಳ್ಳಲು ಬಂದ ಜನರು ಅಂತರ ಕಾಯ್ದುಕೊಳ್ಳಲು ಚೀಲಗಳನ್ನಿಟ್ಟು ಒಂದೆಡೆ ಸಾಲಾಗಿಟ್ಟು ಗುಂಪಾಗಿ ಕುಳಿತುಕೊಂಡಿರೋ ಘಟನೆ ಹಾವೇರಿ ತಾಲೂಕಿನ ದೇವಗಿರಿ ಗ್ರಾಮದಲ್ಲಿ ನಡೆದಿದೆ.
Advertisement
ಪಡಿತರ ಅಕ್ಕಿ ಪಡೆಯಲು ಜನರು ಗುಂಪಾಗಿ ಕುಳಿತುಕೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಿರೋ ಬಾಕ್ಸ್ಗಳಲ್ಲಿ ಚೀಲಗಳನ್ನಿಟ್ಟು ಜನರು ನೆರಳಿಗೆ ಕುಳಿತುಕೊಂಡಿದ್ದಾರೆ.
Advertisement
Advertisement
ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಗುಂಪು ಗುಂಪಾಗಿ ಜನರು ಕುಳಿತಿದ್ದರು. ಬಿಸಿಲು ಹೆಚ್ಚು ಇರೋದ್ರಿಂದ ಸಾಮಾಜಿಕ ಅಂತರದ ಬಾಕ್ಸ್ಗಳಲ್ಲಿ ಚೀಲಗಳನ್ನಿಟ್ಟು ನೆರಳಿಗೆ, ಮಾಸ್ಕ್ ಧರಿಸದೆ ಗುಂಪು ಗುಂಪಾಗಿ ಕುಳಿತುಕೊಂಡಿದ್ದರು. ಕೊರೊನಾ ನಿಯಮವಾದ ಸಾಮಾಜಿ ಅಂತರ, ಮಾಸ್ಕ್ ಧರಿಸುವುದನ್ನು ಜನರು ಗಾಳಿಗೆ ತೂರಿದ್ದರು.
Advertisement