Advertisements

ಪಕ್ಷದ ವಿರುದ್ದ ಯತ್ನಾಳ್ ಇನ್ನೊಮ್ಮೆ ಮಾತಾಡಿ ನೋಡಲಿ: ಶಾಸಕ ಶಿವರಾಜ್ ಪಾಟೀಲ್

ರಾಯಚೂರು: ಪದೇ ಪದೇ ಪಕ್ಷದ ವಿರುದ್ದ ಯತ್ನಾಳ್ ಯಾಕ್ ಮಾತಾಡ್ತಾರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಹೀಗೇ ಮಾತಾಡಲಿ ನೋಡೋಣ, ಏನ್ ಆಗುತ್ತೆ ಅಂತಾ ಗೊತ್ತಾಗುತ್ತೆ ಅಂತ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದ್ದಾರೆ.

Advertisements

ರಾಯಚೂರಿನಲ್ಲಿ ಮಾತನಾಡಿದ ಶಾಸಕ ಡಾ.ಶಿವರಾಜ್ ಪಾಟೀಲ್, ನಮ್ಮದು ಶಿಸ್ತಿನ ಪಕ್ಷ, ಯತ್ನಾಳ್ ಸೀನಿಯರ್ ಲೀಡರ್ ಆಗಿದ್ರೂ ಈಗಾಗಲೇ ನೋಟೀಸ್ ಕೊಡಲಾಗಿದೆ. ಯತ್ನಾಳ್ ಮಾತಾಡಿದ್ರೆ ಏನೂ ಆಗಲ್ಲ. ವಿಜಯೇಂದ್ರ ಯಾವುದರಲ್ಲಿಯೂ ಹಸ್ತಕ್ಷೇಪ ಮಾಡ್ತಿಲ್ಲ. ನಮಗೆ ವಿಜಯೇಂದ್ರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ವಿಜಯೇಂದ್ರನಿಂದ ಕೇವಲ ಯತ್ನಾಳ್ ಗೆ ಮಾತ್ರ ಸಮಸ್ಯೆ ಆಗಿದೆ ಅಂತ ಶಿವರಾಜ್ ಪಾಟೀಲ್ ಟಾಂಗ್ ನೀಡಿದರು.

Advertisements

ಬಿಪಿಎಲ್ ಕಾರ್ಡಿಗೆ ಟಿವಿ, ಫ್ರಿಡ್ಜ್ ಹಾಗೂ ಬೈಕ್ ಮಾನದಂಡ ಆಗಬಾರದು. ನಾನು ಆ ವಿಷಯವನ್ನ ಮಾಧ್ಯಮಗಳಲ್ಲಿ ನೋಡಿದ್ದೇನೆ. ನನಗೆ ಅದರ ಬಗ್ಗೆ ಸಮಗ್ರ ಮಾಹಿತಿ ಇಲ್ಲ. ಟಿವಿ ಹಾಗೂ ಬೈಕ್ ಲಕ್ಸುರಿ ಆಗಿ ಉಳಿದಿಲ್ಲ ಎಂದರು. ಮೊಬೈಲ್, ಟಿವಿ ಹಾಗೂ ಬೈಕ್ ನಮ್ಮ ದುಡಿಮೆಯ ಭಾಗವಾಗಿದೆ. ದುಡಿಮೆ ಮಾಡಲಿಕ್ಕೆ ಅವು ನಮ್ಮ ಸಲಿಕೆ, ಗುದ್ದಲಿಯಂತೆ ಆಗಿದೆ. ಹಾಗಾಗಿ ಈ ರೀತಿಯ ಮಾನದಂಡಗಳು ಸರಿ ಅಲ್ಲ. ಇದರ ಬಗ್ಗೆ ನನ್ನ ವಿರೋಧವಿದೆ ಅಂತ ಶಾಸಕ ಡಾ. ಶಿವರಾಜ್ ಪಾಟೀಲ್ ಹೇಳಿದರು.

Advertisements
Advertisements
Exit mobile version