ನವದೆಹಲಿ: ಹೊಸ ಭೂಪಟದ ಸಂಬಂಧ ನೆರೆರಾಷ್ಟ್ರ ನೇಪಾಳದೊಂದಿಗೆ ವಿವಾದ ಹೆಚ್ಚಾಗುತ್ತಿರುವ ಬೆನ್ನಲ್ಲೇ ಅಲ್ಲಿನ ಸರ್ಕಾರ ಜನರಲ್ಲಿ ಭಾರತದ ವಿರುದ್ಧ ದ್ವೇಷವನ್ನು ಹೆಚ್ಚಿಸಲು ರೇಡಿಯೋಗಳಲ್ಲಿ ಭಾರತ ವಿರೋಧಿ ಹಾಡುಗಳನ್ನು ಪ್ರಸಾರ ಮಾಡುತ್ತಿದೆ ಎಂದು ವರದಿಯಾಗಿದೆ.
ಗಡಿ ಪ್ರದೇಶದಲ್ಲಿರುವ ಭಾರತದ ಉತ್ತರಾಖಂಡ ರಾಜ್ಯದ ಹಳ್ಳಿಗಳಲ್ಲಿ ನೇಪಾಳ ರೇಡಿಯೋ ಸಿಗ್ನಲ್ ಲಭ್ಯವಾಗುತ್ತವೆ. ಈ ವೇಳೆ ಭಾರತ ವಿರೋಧಿ ಹಾಡುಗಳು ಪ್ರಸಾರವಾಗುತ್ತಿರುವುದು ಖಚಿತವಾಗಿದೆ ಎಂಬ ಮಾಹಿತಿ ಲಭಿಸಿದೆ. ಆ ಮೂಲಕ ಭಾರತ ವಿರುದ್ಧ ವ್ಯವಸ್ಥಿತವಾಗಿ ಜನರಿಗೆ ಅಪಪ್ರಚಾರ ನಡೆಸುವತ್ತ ನೇಪಾಳ ಸರ್ಕಾರ ಮುಂದಾಗಿದೆ. ಇದನ್ನು ಓದಿ: ಚೀನಾ ವೈರಸ್‍ಗಿಂತಲೂ ಭಾರತದ ವೈರಸ್ ಮಾರಕ – ನೇಪಾಳ ಪ್ರಧಾನಿಯಿಂದ ವಿವಾದಾತ್ಮಕ ಮಾತು
Advertisement
Advertisement
ಕೆಲವು ನೇಪಾಳಿ ರೇಡಿಯೋಗಳು ನೇಪಾಳಿ ಹಾಡುಗಳೊಂದಿಗೆ ಭಾರತದ ವಿರೋಧಿ ಭಾಷಣಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿದೆ ಎಂದು ಧಾರ್ಚುಲಾ ಉಪಭಾಗದ ದಂಟು ಗ್ರಾಮದ ನಿವಾಸಿ ಶಾಲು ದತಾಲ್ ಅವರು ಮಾಹಿತಿ ನೀಡಿದ್ದಾರೆ. ಗಡಿಯ ಎರಡೂ ಬದಿಗಳಲ್ಲಿರುವ ಜನರು ನೇಪಾಳಿ ಹಾಡುಗಳನ್ನ ಕೇಳುತ್ತಾರೆ. ಈ ವೇಳೆ ನೇಪಾಳಿ ರಾಜಕೀಯ ನಾಯಕರ ಭಾರತ ವಿರೋಧಿ ಭಾಷಣಗಳು ಸಹ ಪ್ರಸಾರ ಮಾಡಲಾಗುತ್ತಿದೆ ಎಂದು ಪಿಟಿಐ ವರದಿ ಮಾಡಿದೆ. ಇದನ್ನು ಓದಿ: ನೇಪಾಳ ಆಯ್ತು, ಈಗ ಢಾಕಾದತ್ತ ಕೈಚಾಚಿದ ಬೀಜಿಂಗ್
Advertisement
ಸ್ಥಳೀಯ ನಿವಾಸಿ ನೀಡಿರುವ ಮಾಹಿತಿ ಅನ್ವಯ, ನಯಾ ನೇಪಾಳ ಮತ್ತು ಕಲಾಪಾಣಿ ರೇಡಿಯೋ ಸೇರಿದಂತೆ ಕೆಲ ಹಳೆ ವಾಹಿನಿಗಳು ಕೂಡ ಇಂತಹ ಹಾಡು, ಭಾಷಣಗಳಲ್ಲಿ ಕಲಾಪಾನಿ ಪ್ರದೇಶ ನೇಪಾಳದೆಂದು ಬಿಂಬಿಸುತ್ತಿರುವ ವರದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ತಿಳಿಸಿದ್ದಾರೆ. ಈ ವಾಹಿನಿಗಳು ನೇಪಾಳದ ಧಾರ್ಚುಲಾದ ಜಿಲ್ಲಾ ಕೇಂದ್ರದ ಸಮೀಪದ ಚಬ್ರಿಗರ್ ಎಂಬ ಪ್ರದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಲಭಿಸಿದೆ. ಕೇವಲ ಮೂರು ವ್ಯಾಪಿಯ ದೂರದಲ್ಲಿ ಇರುವುದರಿಂದ ರೇಡಿಯೋ ತರಂಗಗಳು ಗಡಿ ಪ್ರದೇಶದ ಹಳ್ಳಿಗಳಲ್ಲಿ ಸುಲಭವಾಗಿ ಕೇಳಬಹುದಾಗಿದೆ.
Advertisement
‘ಕಾಲಾಪಾನಿ, ಲಿಪುಲೇಕ್, ಲಿಂಪಿಯಾಮುದ್ರ ಪ್ರದೇಶಗಳು ನಮ್ಮದು. ಜನರೇ ಎಚ್ಚೆತ್ತುಕೊಳ್ಳಿ’ ಎಂಬ ಸರಾಂಶವಿರುವ ಹಾಡು, ಭಾಷಣಗಳು ಪ್ರಸಾರವಾಗುತ್ತಿದೆ ಎಂದು ಸ್ಥಳೀಯ ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಭಾರತದಿಂದ ನನ್ನ ಎಳೆದೊಯ್ದು ಸುಳ್ಳು ಹೇಳಲು ಒತ್ತಾಯಿಸಿದ್ರು: ನೇಪಾಳದ ವಶದಲ್ಲಿದ್ದ ವ್ಯಕ್ತಿ
ಇಂತಹ ವರದಿಗಳು ಪ್ರಸಾರವಾಗುತ್ತಿರುವ ಬಗ್ಗೆ ಸ್ಥಳೀಯ ಆಡಳಿತ ಹಾಗೂ ಪೊಲೀಸರಿಗೆ ಮಾಹಿತಿ ಲಭಿಸಿಲ್ಲ ಎನ್ನಲಾಗಿದೆ. ಇಂತಹ ವಿಚಾರಗಳ ಬಗ್ಗೆ ನಮ್ಮ ಗುಪ್ತಚರದಿಂದ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಪಿಥೋರಗರ್ ಪೊಲೀಸ್ ವರಿಷ್ಠಾಧಿಕಾರಿ ಪ್ರೀತಿ ಪ್ರದರ್ಶಿನಿ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದ ಭೂ ಭಾಗ ಕಾಲಾಪಾನಿ, ಲಿಂಪಿಯಾಧುರಾ, ಲಿಪುಲೇಖ್ ಪ್ರದೇಶಗಳನ್ನು ತನ್ನ ಪ್ರದೇಶ ಎಂದು ನೇಪಾಳ ಹೊಸ ರಾಜಕೀಯ ನಕ್ಷೆ ಬಿಡುಗಡೆ ಮಾಡಿ ಸಂಸತ್‍ನಲ್ಲಿ ಅಂಗೀಕರಿಸಿತ್ತು. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಭಾರತ, ನೇಪಾಳದ ಹೊಸ ನಕ್ಷೆ ರಾಜಕೀಯ ಲಾಭಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದಿತ್ತು.