ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಅನುಷ್ಕಾ ಅವರು ಕೋವಿಡ್ 19 ಟೆಸ್ಟ್ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿದೆ.
Advertisement
ತಮ್ಮ ಪತ್ನಿಗೆ ಕೊರೊನಾ ನೆಗೆಟಿವ್ ಬಂದಿದ್ದ ಖುಷಿಯನ್ನು ವಿರಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕೊರೊನಾ ವೈರಸ್ ಟೆಸ್ಟ್ ನೆಗೆಟಿವ್ ಬಂದ ಬಳಿಕ ಇಬ್ಬರೂ ಪಾಸಿಟಿವ್ ಆಗಿ ಒಟ್ಟಿಗೆ ಸಮಯ ಕಳೆಯುತ್ತಿದ್ದೇವೆ. ಸುರಕ್ಷಿತ ವಾತಾವರಣದಲ್ಲಿ ಸ್ನೇಹಿತರೊಂದಿಗೆ ಬೆರೆಯಲು ಇಷ್ಟವಿಲ್ಲ. ಈ ವರ್ಷ ಭರವಸೆ, ಸಂತೋಷ ಮತ್ತು ಉತ್ತಮ ಆರೋಗ್ಯ ತರಲಿ. ಸುರಕ್ಷಿತವಾಗಿರಿ ಎಂದು ತಿಳಿಸಿದ್ದಾರೆ.
Advertisement
Friends who test negative together spend positive time together! ☺️ Nothing like a get together at home with friends in a safe environment. May this year bring a lot of hope, joy, happiness and good health. Stay safe! #HappyNewYear2021 pic.twitter.com/EyFcUBLqMi
— Virat Kohli (@imVkohli) January 1, 2021
Advertisement
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅನುಷ್ಕಾ, ಆಗಾಗ ತಮ್ಮ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮ್ಯಾಗಜೀನ್ ಒಂದರ ಕವರ್ ಫೋಟೋಗೆ ಅನುಷ್ಕಾ ಬೋಲ್ಡ್ ಆಗಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
Advertisement
ಡಿಸೆಂಬರ್ 11 ರಂದು ತಮ್ಮ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವ ದಿನದಂದು ಪತಿ ಜೊತೆಗಿನ ಫೋಟೋ ಹಂಚಿಕೊಂಡಿದ್ದ ಅನುಷ್ಕಾ, ಮದುವೆ ಬಂಧನಕ್ಕೆ ಮೂರು ವರ್ಷ, ಶೀಘ್ರದಲ್ಲಿಯೇ ನಾವು ಮೂವರು ಆಗಲಿದ್ದೇವೆ ಎಂದು ಬರೆದುಕೊಳ್ಳುವ ಮೂಲಕ ಗರ್ಭಿಣಿಯಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ವಿರಾಟ್ ಹಾಗೂ ಅನುಷ್ಕಾ 2017ರ ಡಿಸೆಂಬರ್ 11 ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
View this post on Instagram