ಹಾಸನ: ನೂರಕ್ಕೆ ನೂರರಷ್ಟು ಯಾವುದೇ ಲಾಕ್ಡೌನ್ ಇಡೀ ರಾಜ್ಯದಲ್ಲಿ ನಾವು ಮಾಡಲ್ಲ. ಕೂಲಿ ಕಾರ್ಮಿಕರು ಬಡವರು ಲಾಕ್ಡೌನ್ಗೆ ಬೆಂಬಲ ನೀಡಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟ ಪಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಆರ್.ಅಶೋಕ್, ಹೊರಗಿನಿಂದ ಹಾಸನಕ್ಕೆ ರೆಸಾರ್ಟ್ಗೆ ಬರುವವರ ಬಗ್ಗೆ ಹಾಸನ ಹಳ್ಳಿಯ ಜನ ಭಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹಾಸನ ಜಿಲ್ಲೆಯಲ್ಲಿ ಇರುವ ರೆಸಾರ್ಟ್ಗಳನ್ನು ಒಂದು ವಾರದೊಳಗೆ ಮುಚ್ಚಲು ಆದೇಶ ಕೊಡುತ್ತೇನೆ. ಕಳೆದ ಹತ್ತು ದಿನಗಳಿಂದ ಎಲ್ಲ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಾವು ತೆಗೆದುಕೊಳ್ಳುವ ತೀರ್ಮಾನಕ್ಕೆ ಜನ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
Advertisement
Advertisement
ಈ ತಿಂಗಳ ನಂತರ ಕೊರೊನಾ ಮುಗಿತು ಎಂಬಂತೆ ಇಲ್ಲ. ಈ ರೋಗದ ಬಗ್ಗೆ ಇನ್ನೂ ಆರು ತಿಂಗಳಾದರೂ ಎಚ್ಚರಿಕೆಯಿಂದ ಇರಬೇಕು. ಸ್ವಯಂ ಲಾಕ್ಡೌನ್ ಮಾಡುವವರು ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವಂತಿಲ್ಲ ಎಂದು ಸೂಚಿಸಿದರು. ಎಸ್ಎಸ್ಎಲ್ಸಿ ಪರೀಕ್ಷೆ ನಂತರ ಕಠಿಣ ನಿಯಮ ಎಂದು ಹೇಳಿದ್ದೇನೆ. ಆದರೆ ಲಾಕ್ಡೌನ್ ಅಂತ ಹೇಳಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.