ಬಿಗ್ಬಾಸ್ ಮನೆ ಸೆಕೆಂಡ್ ಇನ್ನಿಂಗ್ಸ್ ನ 6ನೇ ದಿನ ನಾಯಕ ಅರವಿಂದ್ ಅವರು ವೈಷ್ಣವಿ ಅವರನ್ನು ನೀವು ಬೇಜಾರ್ ಮಾಡ್ಕೋಬೇಡಿ ಎಂದು ಹೇಳಿ ನನ್ನ ಗೇಮ್ ಪ್ಲ್ಯಾನ್ ಏನಿತ್ತು ಎಂಬುದನ್ನು ತಂಡದ ಸದಸ್ಯರಿಗೆ ವಿವರಿಸಿದ್ದಾರೆ.
ಎರಡನೇ ವಾರದ ಟಾಸ್ಕ್ ಗೆ ಮನೆಯ ಸದಸ್ಯರನ್ನು ಎರಡು ತಂಡಗಳನ್ನಾಗಿ ಮಾಡಲು ಬಿಗ್ ಬಾಸ್ ಮುಂದಾಗಿದ್ದರು. ಒಂದು ತಂಡದ ನಾಯಕನಾಗಿ ಮಂಜು ಈಗಾಗಲೇ ಆಯ್ಕೆ ಆಗಿದ್ದರೆ ಎರಡನೇ ತಂಡದ ಲೀಡರ್ ಆಯ್ಕೆಗೆ ಕಳೆದ ಬಾರಿಯ ಟಾಸ್ಕ್ ನಲ್ಲಿ ವಿಜೇತರಾದವರಿಗೆ ಟಾಸ್ಕ್ ನೀಡಲಾಗಿತ್ತು.
Advertisement
Advertisement
ತುಂಡುತುಂಡಾಗಿದ್ದ ಭಾವಚಿತ್ರವನ್ನು ಸರಿಯಾಗಿ ಜೋಡಿಸುವ ಟಾಸ್ಕ್ ನಲ್ಲಿ ಅರವಿಂದ್ ಗೆದ್ದು ನಾಯಕನಾಗಿ ಆಯ್ಕೆ ಆಗುತ್ತಾರೆ. ಇದಾದ ಬಳಿಕ ಅರವಿಂದ್ ಮತ್ತು ಮಂಜು ತಂಡವನ್ನು ಆಯ್ಕೆ ಮಾಡಿಕೊಳ್ಳುವ ಪೆಡಸ್ಟಾಲ್ ಟಾಸ್ಕ್ ಗೆ ಸಿದ್ಧವಾಗುತ್ತಾರೆ.
Advertisement
ಈ ಟಾಸ್ಕ್ ನಲ್ಲಿ ಅರವಿಂದ್ ಅನುಕ್ರಮವಾಗಿ ದಿವ್ಯಾ ಉರುಡುಗ, ದಿವ್ಯಾ, ಪ್ರಶಾಂತ್, ಚಕ್ರವರ್ತಿ, ಶಮಂತ್, ವೈಷ್ಣವಿ ಅವರನ್ನು ಆಯ್ಕೆ ಮಾಡಿದರು. ಮಂಜು ದಿವ್ಯ ಸುರೇಶ್, ರಘು, ನಿಧಿ ಸುಬ್ಬಯ್ಯ ಅವರನ್ನು ಆಯ್ಕೆ ಮಾಡಿದ್ದರು. ಈ ವೇಳೆಗೆ ಅರವಿಂದ್ 5 ಮಂದಿಯನ್ನು ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಶುಭಾ ಪೂಂಜಾ ಮತ್ತು ಪ್ರಿಯಾಂಕಾ ತಿಮ್ಮೇಶ್ ಮಂಜು ತಂಡವನ್ನು ಸೇರಿದರು.
Advertisement
ತಂಡ ರಚನೆಯಾದ ನಂತರ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್, ನಮ್ಮ ಟೀಂನವವರ ಜೊತೆ ಒಳ್ಳೇದಾಗಿರಿ, ಆ ಟೀಂ ಜೊತೆಗೂ ಚೆನ್ನಾಗಿರಿ. ನಿಮ್ಮನ್ನು ನಾನು ಕೊನೆಗೆ ತೆಗೆದುಕೊಳ್ಳಬಹುದಿತ್ತು. ಯಾಕೆಂದರೆ ಮಂಜ ನಿಮ್ಮನ್ನು ತಗೆದುಕೊಳ್ಳುತ್ತಿರಲಿಲ್ಲ. ಅದಕ್ಕೆ ನಾನು ನಿಮ್ಮನ್ನು ಫಸ್ಟ್ ಆಯ್ಕೆ ಮಾಡಿದ್ದು, ಬೆಸ್ಟ್ ಫಲಿತಾಂಶ ನೀಡಬೇಕು ಎಂದರು. ಇದನ್ನೂ ಓದಿ: ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿ ‘ಕಪ್’ ಗೆದ್ದ ದಿವ್ಯಾ
ತನ್ನ ಮಾತನ್ನು ಮುಂದುವರಿಸಿದ ಅರವಿಂದ್, ನಿಮ್ಮನ್ನು ಲಾಸ್ಟ್ ತೆಗೆದುಕೊಂಡೆ ಎಂದು ಬೇಜಾರು ಮಾಡಿಕೊಳ್ಳಬೇಡಿ. ನಿಮ್ಮನ್ನು ಫಸ್ಟ್ ತೊಗೊಬಿಡ್ತಿದ್ದೆ ಎಂದು ವೈಷ್ಣವಿ ಜೊತೆ ಹೇಳಿದರು.ಇದನ್ನೂ ಓದಿ:ಪತ್ತರವಳ್ಳಿ ಅಂದರೆ ಬೇಲಿ ಸಂದಿಯಲ್ಲಿ ನಡೆಯುವ ಕಾಮ: ಮಂಜು ವಿರುದ್ಧ ಚಕ್ರವರ್ತಿ ಗರಂ
ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ ಜೊತೆ ಮಂಜು, ದಿವ್ಯಾ ಸಂಬಂಧ ಈಗಾಗಲೇ ಹಾಳಾಗಿದೆ. ಹೀಗಾಗಿ ಇವರಿಬ್ಬರು ಯಾರ ತಂಡ ಸೇರುತ್ತಾರೆ ಎಂಬ ಕುತೂಹಲ ಇತ್ತು. ಆದರೆ ಆರವಿಂದ್ ದಿವ್ಯಾ ಅವರನ್ನು ಆಯ್ಕೆ ಮಾಡಿದ ಬಳಿಕ ಪ್ರಶಾಂತ್ ಮತ್ತು ಚಕ್ರವರ್ತಿ ಅವರನ್ನು ಆಯ್ಕೆ ಮಾಡಿ ಮತ್ತೆ ಮನೆಯ ಸದಸ್ಯರ ಮಧ್ಯೆ ಗಲಾಟೆ ಆಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.
ವೈಷ್ಣವಿ, ದಿವ್ಯಾ, ಅರವಿಂದ್ ಕಿಚನ್ ವಿಭಾಗವನ್ನೇ ನೋಡಿಕೊಳ್ಳುತ್ತಿದ್ದಾರೆ. ಮೂವರು ಮನೆಯ ಒಳಗಡೆ ಮತ್ತು ಹೊರಗಡೆಯೂ ಅತ್ಯುತ್ತಮ ಸ್ನೇಹಿತರಾಗಿದ್ದಾರೆ. ಪ್ರಶಾಂತ್, ಚಕ್ರವರ್ತಿ, ಶಮಂತ್ ಸಹ ಉತ್ತಮ ಸ್ನೇಹಿತರು. ಹೀಗಾಗಿ ಉತ್ತಮ ಸ್ನೇಹಿತರು ಇರುವ ಅರವಿಂದ್ ತಂಡ ಎದುರಾಳಿ ಮಂಜು ತಂಡದ ವಿರುದ್ಧ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಮೂಡಿದೆ.