ಮುಂಬೈ: ‘ನೀವು ನನ್ನ ಪೂರ್ಣಗೊಳಿಸಿದ್ದೀರಿ’ ಎಂದು ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಗೆಳತಿ ನತಾಶಾ ಸ್ಟಾಂಕೋವಿಕ್ ಅವರು ಹೇಳಿದ್ದಾರೆ.
ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಯಾಗುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಈ ಕೊರೊನಾ ಹಿನ್ನೆಲೆ ಲಾಕ್‍ಡೌನ್ ಸಮಯದಲ್ಲಿ ತಮ್ಮ ಗೆಳತಿ ನತಾಶಾರೊಂದಿಗೆ ಸಮಯ ಕಳೆಯುತ್ತಿದ್ದಾರೆ. ನತಾಶಾ ಅವರು ಕೂಡ ಗರ್ಭಿಣಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಆಗಾಗ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Advertisement
https://www.instagram.com/p/CClZgmogPvn/?igshid=qh83c47rnkqe
Advertisement
ಇದೀಗ ತನ್ನ ಪ್ರಿಯಕರ ಹಾರ್ದಿಕ್ ಪಾಂಡ್ಯ ಜೊತೆ ಇರುವ ಒಂದು ರೊಮ್ಯಾಂಟಿಕ್ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಫೋಟೋಗೆ ನತಾಶಾ, “ನೀವು ನನ್ನನ್ನು ಪೂರ್ಣಗೊಳಿಸಿದ್ದೀರಿ” ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅಲ್ಲದೇ ಆ ಫೋಟೋವನ್ನು ಹಾರ್ದಿಕ್ ಪಾಂಡ್ಯಗೆ ಟ್ಯಾಗ್ ಮಾಡಿದ್ದಾರೆ. ಬಳಿಕ ಈ ಫೋಟೋಗೆ ಹಾರ್ದಿಕ್ ಪಾಂಡ್ಯ ಹಾರ್ಟ್ ಎಮೋಜಿಯನ್ನು ಹಾಕುವ ಮೂಲಕ ರಿಪ್ಲೈ ಮಾಡಿದ್ದಾರೆ.
Advertisement
ನತಾಶಾ ಅವರು ತಾವೂ ವ್ಯಾಯಾಮ ಮಾಡುತ್ತಿರುವ ಫೋಟೋವನ್ನು ಕೂಡ ಇನ್‍ಸ್ಟಾಗ್ರಾಂ ಸ್ಟೋರಿಸ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಹೀಗೆ ಇಬ್ಬರು ಸಂತೋಸದಿಂದ ಕಾಲಕಳೆಯುತ್ತಿದ್ದಾರೆ.
Advertisement
https://www.instagram.com/p/CCyd9UFA3I9/?utm_source=ig_embed
ಮೇ 31 ರಂದು ಸೋಶಿಯಲ್ ಮೀಡಿಯಾದ ಮೂಲಕ ಹಾರ್ದಿಕ್ ಪಾಂಡ್ಯ ತಾವು ತಂದೆಯಾಗುತ್ತಿರುವ ಬಗ್ಗೆ ರಿವೀಲ್ ಮಾಡಿದ್ದರು. ಈ ಕುರಿತು ಇನ್‍ಸ್ಟಾದಲ್ಲಿ ಗೆಳತಿ ನತಾಶಾರೊಂದಿಗೆ ಇರೋ ಫೋಟೋವನ್ನು ಪೋಸ್ಟ್ ಮಾಡಿದ್ದ ಹಾರ್ದಿಕ್ ಪಾಂಡ್ಯ, “ನತಾಶಾ ಮತ್ತು ನಾನು ಒಟ್ಟಿಗೆ ಉತ್ತಮ ಪ್ರಯಾಣವನ್ನು ಹೊಂದಿದ್ದೇವೆ. ಈ ಬಾಂದವ್ಯ ಮತ್ತಷ್ಟು ಉತ್ತಮಗೊಳ್ಳುವತ್ತ ಹೊರಟಿದ್ದು, ಶೀಘ್ರವೇ ನಮ್ಮ ಜೀವನಕ್ಕೆ ಹೊಸ ಜೀವವನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ನಮ್ಮ ಜೀವನದ ಈ ಹೊಸ ಹಂತಕ್ಕಾಗಿ ರೋಮಾಂಚನಗೊಂಡಿದ್ದು, ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಕೋರುತ್ತೇವೆ” ಎಂದು ಬರೆದುಕೊಂಡಿದ್ದಾರೆ.
https://www.instagram.com/p/CCu87_blItL/?utm_source=ig_embed
ಬಹು ಸಮಯದಿಂದ ಒಟ್ಟಿಗೆ ಓಡಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯನ್ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್ ಹೊಸ ವರ್ಷದ ಮೊದಲ ದಿನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಕುರಿತ ವಿಡಿಯೋ ಹಾಗೂ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು.
ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡಕ್ಕೆ ಕಮ್‍ಬ್ಯಾಕ್ ಮಾಡಿದ್ದರು. ಆದರೆ ಕೊರೊನಾದಿಂದಾಗಿ ಸರಣಿಯನ್ನು ಮುಂದೂಡಲಾಯಿತು. ಆದರೆ ಮುಂಬರುವ ದಿನಗಳಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನ ಭದ್ರಪಡಿಸಿಕೊಳ್ಳಲಿದ್ದಾರೆ. ಅಲ್ಲದೇ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವನ್ನು ಹೊಂದಿದ್ದರು. ಆದರೆ ಕೊರೊನಾ ಕಾರಣದಿಂದ ಐಪಿಎಲ್ ಮುಂದೂಡಲಾಗಿತ್ತು.