ನೆಲಮಂಗಲ: ಪುರಾಣ ಪ್ರಸಿದ್ಧ ಮಹಿಮರಂಗನ ಬೆಟ್ಟದಲ್ಲಿರುವ ನೀಲಗಿರಿ ತೆರವುಗೊಳಿಸಿ ಕಾಡುಮರ ಬೆಳೆಸಿ ಹೊಸ ರೂಪದ ಅಭಿಯಾನಕ್ಕೆ ಜಯ ಸಿಕ್ಕಿದೆ.
ಪುರಾಣ ಪ್ರಸಿದ್ಧ ಲಕ್ಷಾಂತರ ಭಕ್ತ ಸಮೂಹ ಹೊಂದಿರುವ ಶ್ರೀ ಮಹಿಮರಂಗಸ್ವಾಮಿ ನೆಲೆಸಿದ ಬೆಟ್ಟದಲ್ಲಿ ಸಂಪೂರ್ಣ ನೀಲಗಿರಿ ಆವರಿಸಿ ಪ್ರಾಣಿ ಪಕ್ಷಿಗಳು ವಲಸೆ ಹೋಗುವಂತೆ ಆಗಿತ್ತು. ಇದನ್ನು ಮನಗಂಡ ಯುವಕರು ಅಭಿಯಾನ ಆರಂಭಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. 25 ಎಕರೆ ಪ್ರದೇಶದ ಬೆಟ್ಟದಲ್ಲಿರುವ ನೀಲಗಿರಿಯನ್ನು ತೆರವು ಮಾಡಿ ಆ ಸ್ಥಳದಲ್ಲಿ ಕಾಡು ಮರಗಳನ್ನು ನೆಟ್ಟು ಪೋಷಣೆ ಮಾಡಲು ಇಲಾಖೆ ನಿರ್ಧರಿಸಿದೆ. ಇದನ್ನೂ ಓದಿ: ಟ್ರೆಡಿಷನಲ್ ಲುಕ್ಗೆ 58 ಲಕ್ಷ ಖರ್ಚು ಮಾಡಿದ ಐರಾವತ ಬೆಡಗಿ
ಜುಲೈ 2ರಂದು ನೀಲಗಿರಿ ಮರಗಳ ಹರಾಜು ಕಾರ್ಯ ನಡೆಯಲಿದೆ. ಕಾಡಿನಲ್ಲಿ ನೀಲಗಿರಿ ಹೋಗಿ ಕಾಡುಮರಗಳ ಇದ್ದರೆ ವಲಸೆ ಹೋಗಿರುವ ಪ್ರಾಣಿ ಪಕ್ಷಿಗಳು ಮತ್ತೆ ಮಹಿಮರಂಗನ ಬೆಟ್ಟಕ್ಕೆ ಆಗಮಿಸುವ ವಿಶ್ವಾಸವಿದ್ದು, ಯುವಕರ ಅಭಿಯಾನಕ್ಕೆ ಯಶಸ್ಸು ಸಿಕ್ಕಿದೆ. ಅಂತರ್ಜಲಕ್ಕೆ ಕಂಟಕವಾದ ನೀಲಗಿರಿ ತೆರವಿಗೆ ಜಿಲ್ಲಾಧಿಕಾರಿ ಆದೇಶವಿದ್ದರೂ ಕೊರೊನಾ ಆರಂಭವಾದ ನಂತರ ಜಿಲ್ಲೆಯಲ್ಲಿ ತೆರವು ಕಾರ್ಯ ಸ್ಥಗಿತವಾಗಿತ್ತು. ಅನೇಕ ಮನವಿಗಳ ನಂತರ ಮಹಿಮರಂಗ ಬೆಟ್ಟದ ಉತ್ತಮ ಪರಿಸರಕ್ಕೆ ಅಧಿಕಾರಿಗಳು ಸ್ಪಂದಿಸಿದ್ದು ತಹಶೀಲ್ದಾರ್ ಮಂಜುನಾಥ್ ಬೆಟ್ಟದ ಹೊಸರೂಪಕ್ಕೆ ಶಕ್ತಿ ನೀಡಿದ್ದಾರೆ. ಇದನ್ನೂ ಓದಿ: ಜಿಯೋದಿಂದ ಬರುತ್ತೆ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ – ಬೆಲೆ ಎಷ್ಟು? ವಿಶೇಷತೆ ಏನು? ಕಡಿಮೆ ಬೆಲೆಗೆ ಹೇಗೆ ಸಿಗುತ್ತೆ?
ಕೆಲವೇ ತಿಂಗಳಲ್ಲಿ ಸಂಪೂರ್ಣ ಬೆಟ್ಟ ಕಾಡು ಮರಗಳು ಹಾಗೂ ಔಷಧಿ ಸಸ್ಯಗಳಿಂದ ಹಸಿರಾಗಲಿದೆ. ಮಹಿಮರಂಗ ಬೆಟ್ಟದಲ್ಲಿ ನೀಲಗಿರಿ ಬೆಳೆದ ನಂತರ ವಾತಾವರಣ ಬದಲಾವಣೆ ಹಾಗೂ ಪ್ರಾಣಿಪಕ್ಷಿಗಳ ಬದುಕಲು ಕಷ್ಟವಾದ ಬಗ್ಗೆ ಅಧಿಕಾರಿಗಳಿಗೆ ಗಮನಕ್ಕೆ ತಂದು ಮನವಿ ಮಾಡಿದ ನಂತರ ಸ್ಪಂದಿಸಿದ್ದಾರೆ. ನೀಲಗಿರಿ ತೆಗೆದು ಕಾಡು ಮರಗಳನ್ನು ಬೆಳೆಸಲು ಶೀಘ್ರವೇ ತಯಾರಿ ನಡೆಯಲಿದೆ ಎಂದು ಅಭಿಯಾನದದಲ್ಲಿ ಪಾಲ್ಗೊಂಡ ವಿಜಯ್ ಹೊಸಪಾಳ್ಯ ಹೇಳಿದ್ದಾರೆ.