ಮಂಡ್ಯ: ಮನ್‍ಮುಲ್‍ಗೆ ಪೂರೈಕೆ ಆಗುತ್ತಿದ್ದ ನೀರು ಮಿಶ್ರಿತ ಹಾಲು ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್‍ಮುಲ್‍ನ ಎಂಡಿಯನ್ನು ವರ್ಗಾವಣೆ ಮಾಡಿ ಏಳು ಮಂದಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
Advertisement
ಮಂಡ್ಯದ ಮನ್‍ಮುಲ್‍ಗೆ ನೀರು ಮಿಶ್ರಿತ ಹಾಲನ್ನು ಹಲವು ತಿಂಗಳಿನಿಂದ ಸರಬರಾಜು ಆಗುತ್ತಿತ್ತು. ಈ ಬಗ್ಗೆ ಮನ್‍ಮುಲ್‍ನ ಅಧ್ಯಕ್ಷರು ಹಾಗೂ ನಿರ್ದೇಶಕರು ಹಲವು ದಿನಳ ತನಿಖೆ ಬಳಿಕ ಈ ಜಾಲವನ್ನು ಭೇದಿಸಿ ಪೊಲೀಸರಿಗೂ ದೂರು ನೀಡಿದ್ದರು. ಈ ನಡುವೆ ಕೆಎಂಎಫ್ ಅಧಿಕಾರಿಗಳು ಸಹ ತನಿಖೆ ನಡೆಸುತ್ತಿದ್ದರು. ಇದನ್ನೂ ಓದಿ: ನೀನು ಎಲ್ಲಿದ್ದರೂ ನಿನ್ನ ನಗು ಜೀವಂತ ಚಿರು ಮಗನೆ: ಅರ್ಜುನ್ ಸರ್ಜಾ ಭಾವುಕ
Advertisement
Advertisement
ಮನ್‍ಮುಲ್‍ನಲ್ಲಿ ನಡೆದಿರುವ ಈ ಹಗರಣಕ್ಕೆ ಅಧಿಕಾರಿಗಳೇ ಕಾರಣ ಎಂದು ಕೆಎಂಎಫ್ ವರದಿ ನೀಡಿ, ಏಳು ಮಂದಿಯನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿತ್ತು. ಹೀಗಾಗಿ ಮನ್‍ಮುಲ್‍ನ ಮದ್ದೂರಿನ ಉಪಕಚೇರಿ ವ್ಯವಸ್ಥಾಪಕ ಮರಿರಾಚಯ್ಯ, ಭರತ್‍ರಾಜ್, ರಾಮಕೃಷ್ಣಯ್ಯ, ವಿಸ್ತಾರಣಾಧಿಕಾರಿಗಳಾದ ಮಧುಕುಮಾರ್, ರಮೇಶ್, ಟ್ರಾನ್ಸ್ ಪೋರ್ಟ್ ವಿಭಾಗದ ಡಾ.ವೆಂಕಟೇಶ್ ಅವರುಗಳನ್ನು ಅಮಾನತು ಮಾಡಲಾಗಿದೆ.
Advertisement
ಮನ್‍ಮುಲ್‍ನ ಎಂಡಿಯನ್ನು ಸಹ ವರ್ಗಾವಣೆ ಮಾಡಿ ಮೈಸೂರಿನ ಮೈಮುಲ್‍ನ ಎಂಡಿ ಆಗಿದ್ದ ಅಶೋಕ್ ಅವರನ್ನು ನೇಮಕ ಮಾಡಲಾಗಿದೆ.