ಮುಂಬೈ: ಬಾಲಿವುಡ್ ತಾರೆ ಕೃತಿ ಸನನ್ ಗೆ ಕೊರೊನಾ ಸೋಂಕು ತಗುಲಿದೆ. ಜುಗ್ ಜುಗ್ ಜಿಯೋ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನೀತು ಕಪೂರ್ ಮತ್ತು ವರುಣ್ ಧವನ್ ಸಹ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ನಿರೂಪಕ ಮನೀಷ್ ಪೌಲ್ ಅವರಿಗೂ ಕೊರೊನಾ ಸೋಂಕು ತಗುಲಿದ್ದು, ಎಲ್ಲರೂ ವೈದ್ಯರ ಸಲಹೆ ಮೇರೆಗೆ ಐಸೋಲೇಷನ್ ನಲ್ಲಿದ್ದಾರೆ.
Advertisement
ಅನ್ಲಾಕ್ ಬಳಿಕ ಕೊರೊನಾ ಆತಂಕದ ನಡುವೆ ಸಿನಿಮಾ ಉದ್ಯಮದ ಚಟುವಟಿಕೆಗಳು ಆರಂಭಗೊಂಡಿವೆ. ಕೃತಿ ಸನನ್ ಚಂಡೀಗಢನಲ್ಲಿ ನಟ ರಾಜಕಮಾರ್ ರಾವ್ ಜೊತೆಗಿನ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಚಂಡೀಗಢನಿಂದ ಮುಂಬೈಗೆ ಮರಳಿದ ಬಳಿಕ ಕೃತಿ ಕೊರೊನಾ ವರದಿ ಬಂದಿದ್ದು, ಸೋಂಕು ತಗುಲಿರೋದು ದೃಢಪಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಟಿ ಅಥವಾ ಕುಟುಂಬಸ್ಥರು ಸೋಂಕು ತಗುಲಿರುವ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.
Advertisement
View this post on Instagram
Advertisement
ಭಾನುವಾರ ಚಂಡೀಗಢನಿಂದ ಮುಂಬೈಗೆ ಬಂದಿಳಿದಿದ್ದ ಕೃತಿ ಸನನ್ ಮಾಧ್ಯಮಗಳ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದರು. ಮಾಧ್ಯಮಗಳಿಂದ ದೂರವಿದ್ದರೂ ಒಂದು ಕ್ಷಣಕ್ಕೂ ಮಾಸ್ಕ್ ತೆಗೆಯಲ್ಲ ಎಂದು ಹೇಳಿ ಕಾರ್ ಹತ್ತಿದ್ದರು.