– ಜಲಧಾರೆಯ ಸೊಬಗಿಗೆ ಮಾರು ಹೋದ ಪ್ರವಾಸಿಗರು
– ಫಾಲ್ಸ್ ಎಲ್ಲಿದೆ..? ಏನಿದರ ವಿಶೇಷ..?
ಚಿಕ್ಕಮಗಳೂರು: ನೈಸರ್ಗಿಕ ಸೌಂದರ್ಯದ ಖನಿಯಂತಿರೋ ಕಾಫಿನಾಡಲ್ಲೀಗ ಮುಂಗಾರು ಮಳೆ ಕೊಂಚ ಬಿಡುವು ಪಡೆದಿದೆ. ಆದರೆ ಮಳೆಯ ಹನಿಗಳ ಸಿಂಚನದಿಂದಾಗಿ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಚಂದ್ರದ್ರೋಣ ಪರ್ವತ ಶ್ರೇಣಿಯ ಸೆರಗಲ್ಲಿರೋ ಅಬ್ಬುಗುಡಿಗೆ ಫಾಲ್ಸ್ ನಿಸರ್ಗದ ನೈಜ ಸೌಂದರ್ಯವನ್ನೇ ಅನಾವರಣಗೊಳಿಸಿದೆ. ದಟ್ಟಕಾನನದ ನಡುವೆ ಬಂಡೆಗಳ ಮೇಲಿಂದ ಧುಮ್ಮಿಕ್ಕಿ ಹರಿಯುತ್ತಿರೋ ಜಲಪಾತವೀಗ ಅದ್ಭುತ ಲೋಕವನ್ನೇ ಸೃಷ್ಟಿಸಿದೆ. ಈ ಜಲಧಾರೆಯ ಸೊಬಗನ್ನು ಸವಿಯೋಕೆ ಪ್ರವಾಸಿಗರ ದಂಡೀಗ ಕಾಫಿನಾಡಲ್ಲಿ ಮನೆ ಮಾಡಿದೆ.
Advertisement
ಹೌದು. ಎಲ್ಲಿ ನೋಡಿದರೂ ಹಚ್ಚ ಹಸರಿನ ಸೊಬಗು. ತಂಪಾದ ವಾತಾವರಣ. ಇದು ಕಾಫಿನಾಡಲ್ಲಿ ಕಂಡು ಬರುವ ಸುಂದರ ದೃಶ್ಯಗಳು. ಈ ಸೌಂದರ್ಯವನ್ನ ಸವಿಯಲೆಂದೇ ಪ್ರವಾಸಿಗರು ಕಾಫಿನಾಡನ್ನ ಭೂಲೋಕದ ಸ್ವರ್ಗ ಅಂತಾರೆ. ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟರೆ ಸಾಕು ಮನಸ್ಸು ಪ್ರಪುಲ್ಲಗೊಳ್ಳುತ್ತೆ. ಅದರಲ್ಲೂ ಇಲ್ಲಿನ ಜಲಪಾತಗಳಲ್ಲಿ ಎಂಜಾಯ್ ಮಾಡಿದರೆ ಪ್ರವಾಸಿಗರು ಕಾಫಿನಾಡ ಸೌಂದರ್ಯಕ್ಕೆ ಮತ್ತಷ್ಟು ಮಾರು ಹೋಗ್ತಾರೆ. ಅದರಲ್ಲೂ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಈ ಜಲಪಾತ ಹೊರ ಪ್ರಪಂಚಕ್ಕೆ ಅಷ್ಟಾಗಿ ಗೊತ್ತಿಲ್ಲ. ಆದರೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿರೋ ಈ ಅಬ್ಬುಗುಡಿಗೆ ಜಲಪಾತ ಕಳಸಾದಿಂದ ಕೇವಲ 5 ಕಿ.ಮೀ ದೂರವಷ್ಟೆ. ಹಚ್ಚ ಹಸಿರಿನ ಕಾನನದ ಮಧ್ಯೆ ಹಾಲ್ನೋರೆಯಂತೆ ಭಾಸವಾಗುತ್ತಾ ಧುಮ್ಮಿಕ್ಕುವ ಈ ಜಲಪಾತದ ಸೌಂದರ್ಯವನ್ನು ವರ್ಣಿಸಲಾಧ್ಯ. ಅದರಲ್ಲೂ ಮಳೆಗಾಲದಲ್ಲಿ ಈ ಜಲಪಾತವನ್ನ ನೋಡುವುದೇ ಕಣ್ಣಿಗೆ ಹಬ್ಬ. ಮಳೆಗಾಲದಲ್ಲಿ ಈ ಜಲಪಾತದ ಸೊಬಗನ್ನ ಕಂಡವರು ಕಾಫಿನಾಡಿನ ಬಗ್ಗೆ ಮತ್ತಷ್ಟು ಫಿದಾ ಆಗೋದ್ರಲ್ಲಿ ನೋ ಡೌಟ್.
Advertisement
Advertisement
ಕಳಸ ಪಟ್ಟಣದಿಂದ ಐದು ಕಿ.ಮೀ ಸಾಗಿ ಅರ್ಧ ಕಿ.ಮೀ. ನಷ್ಟು ದೂರ ಕಾಲು ದಾರಿಯಲ್ಲಿ ನಡೆದು ಹೋದರೆ ನೀರಿನ ಸದ್ದು ಕೇಳೋದಕ್ಕೆ ಶುರುವಾಗುತ್ತೆ. ಸುಮಾರು 20-30 ಅಡಿ ಎತ್ತರದಿಂದ ಹಾಲ್ನೊರೆಯಂತೆ ದುಮ್ಮಿಕ್ಕೋ ಜಲಪಾತವನ್ನ ನೋಡಲೆರಡು ಕಣ್ಣು ಸಾಲದು. ಮಳೆಗಾಲದಲ್ಲಿ ಅಬ್ಬುಗುಡಿಗೆ ಫಾಲ್ಸ್ನ ಚೇಲುವೇ ಬೇರೆ. ಈ ಫಾಲ್ಸ್ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದೆ. ಇಲ್ಲಿಗೆ ಬರುವವರು ಪ್ರವಾಸಿಗರು ಮೋಜು-ಮಸ್ತಿ ಮಾಡೋದ್ರಿಂದ ಗ್ರಾಮಸ್ಥರಿಗೆ ಕಿರಿಕಿರಿಯಾಗಿದೆ. ಫಾಲ್ಸ್ಗೆ ಮೂಲಭೂತ ಸೌಲಭ್ಯಗಳಿಲ್ಲ. ಈ ಫಾಲ್ಸ್ ಅಭಿವೃದ್ಧಿಯಾಗುತ್ತೆ. ಪ್ರವಾಸಿಗರು ಬರೋದ್ರಿಂದ ಗ್ರಾಮ ಅಭಿವೃದ್ಧಿಯಾಗುತ್ತೆ ಎಂದು ಭಾವಿಸಿದ್ದ ಗ್ರಾಮಸ್ಥರಿಗೆ ಪ್ರವಾಸಿಗರಿಂದ ಕಿರಿಕಿರಿಯೇ ಹೆಚ್ಚಾಗಿದೆ. ಇಲ್ಲಿ ಕೆಲ ಚಿತ್ರಗಳ ಚಿತ್ರೀಕರಣ ಕೂಡ ನಡೆದಿದೆ. ರಸ್ತೆ ಸಂಪರ್ಕವೂ ಸರಿ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಪ್ರವಾಸಿಗರ ವರ್ತನೆಗೆ ಕಡಿವಾಣ ಹಾಕಿ. ಜಲಪಾತವನ್ನು ಅಭಿವೃದ್ಧಿಪಡಿಸಬೇಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Advertisement
ಒಟ್ಟಾರೆ ಅಗತ್ಯ ಅಭಿವೃದ್ಧಿಯಾದಲ್ಲಿ ಈ ಫಾಲ್ಸ್ ಅದ್ಭುತ ತಾಣವಾಗೋದ್ರದಲ್ಲಿ ಎರಡು ಮಾತಿಲ್ಲ. ಮಳೆಗಾಲದಲ್ಲಿ ಕಳಸ-ಹೊರನಾಡಿಗೆ ಭೇಟಿ ಕೊಡೋ ಪ್ರವಾಸಿಗರು ಕಳಸೇಶ್ವರ ಹಾಗೂ ಅನ್ನಪೂಣೇಶ್ವರಿಯ ದರ್ಶನ ಪಡೆದು ಫಾಲ್ಸ್ ಸೌಂದರ್ಯವನ್ನ ಸವಿಯುತ್ತಾರೆ. ಪ್ರೇಕ್ಷಣಿಯ ಸ್ಥಳಗಳು, ತಂಪು ವಾತಾವರಣ, ಹಕ್ಕಿಪಕ್ಷಿಗಳ ನಿನಾದ ಪ್ರವಾಸಿಗರ ನೆನಪಲ್ಲಿ ಉಳಿಯಲಿದೆ. ಆದರೆ, ಸರ್ಕಾರ ಇತ್ತ ಗಮನ ಹರಿಸಿ ಇಲ್ಲಿಗೆ ಮೂಲಭೂತ ಸೌಲಭ್ಯ ಕಲ್ಪಿಸೋದ್ರ ಜೊತೆ ಈ ತಾಣವನ್ನ ಅಭಿವೃದ್ಧಿ ಪಡಿಸಬೇಕೆಂಬ ಕೂಗು ಜೋರಿದೆ.