-ನಿಯಂತ್ರಣಕ್ಕೆ ಸಿಗದ ಮಹಾಮಾರಿಯ ಮ’ರಣ’ಕೇಕೆ
ನವದೆಹಲಿ: ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 90,633 ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ 1,065 ಜನರನ್ನ ರಾಕ್ಷಸಿ ಕೊರೊನಾ ಬಲಿ ಪಡೆದುಕೊಂಡಿದೆ.
ಒಟ್ಟು ಸೋಂಕಿತರ ಸಂಖ್ಯೆ 41,13,812ಕ್ಕೆ ಏರಿಕೆಯಾಗಿದ್ದು, ಸದ್ಯ ದೇಶದಲ್ಲಿ 8,62,320 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 70,626 ಜನರನ್ನು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದ್ದು, ಅಮರಿಕಾ ಮತ್ತು ಬ್ರೆಜಿಲ್ ಮೊದಲ, ಎರಡನೇ ಸ್ಥಾನದಲ್ಲಿವೆ.
Advertisement
India's #COVID19 tally crosses 41 lakh mark with a single-day spike of 90,633 new cases & 1,065 deaths reported in the last 24 hours.
The total case tally stands at 41,13,812 including 8,62,320 active cases, 31,80,866 cured/discharged/migrated & 70,626 deaths: Ministry of Health pic.twitter.com/GjmHsTOCaU
— ANI (@ANI) September 6, 2020
Advertisement
ಕಳೆದ 24 ಗಂಟೆಯಲ್ಲಿ 70 ಸಾವಿರ ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಒಟ್ಟು 70,072 ಜನರು ಡಿಸ್ಚಾರ್ಜ್ ಆಗಿದ್ದು, ಗುಣಮುಖ ಪ್ರಮಾಣ ಶೇ.77.23ರಷ್ಟಿದೆ. ಮಹಾರಾಷ್ಟ್ರ ಸೋಂಕಿತರ ಸಂಖ್ಯೆ ದೇಶದ ಶೇ.21ರಷ್ಟಿದೆ. ಇನ್ನುಳಿದಂತೆ ತಮಿಳುನಾಡು ಶೇ.12.63, ಆಂಧ್ರ ಪ್ರದೇಶ 11.91, ಕರ್ನಾಟಕ ಶೇ.8.82 ಮತ್ತು ಉತ್ತರ ಪ್ರದೇಶ ಶೇ.6.14 ರಷ್ಟಿದೆ. ಐದು ರಾಜ್ಯಗಳಲ್ಲಿ ಶೇ.60 ರಷ್ಟು ಸೋಂಕಿತರಿದ್ದಾರೆ.