-ಪ್ರತಿ ಭಾನುವಾರ ಕಂಪ್ಲೀಟ್ ಲಾಕ್ಡೌನ್
ಬೆಂಗಳೂರು: ಲಾಕ್ಡೌನ್ ಮಾರ್ಗಸೂಚಿ ಸಂಬಂಧಿಸಿದ ಸಭೆಯ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ನಾಳೆಯಿಂದ ಕೆಎಸ್ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರ ಆರಂಭವಾಗಲಿದೆ. ಸಾರಿಗೆ ವಾಹನಗಳು ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಸಂಚಾರ ನಡೆಸಲಿವೆ. ರೈಲು ಪ್ರಯಾಣ ಸಹ ರಾಜ್ಯದ ಒಳಗಡೆ ಓಡಾಟ ನಡೆಸಲಿವೆ ಎಂದು ತಿಳಿಸಿದರು.
ನಾಳೆಯಿಂದ ಬಸ್ ಸಂಚಾರ ಆರಂಭ-ಸಲೂನ್ ಶಾಪ್ ತೆರೆಯಲು ಅನುಮತಿ #KarnatakaLockdown #COVID19 @CMofKarnataka @BSYBJP @BJP4Karnataka #CoronaVirus #Karnataka @BMTC_BENGALURU @KSRTC_Journeys pic.twitter.com/iFJtRfquS7
— PublicTV (@publictvnews) May 18, 2020
Advertisement
ಎಲ್ಲ ಪಾರ್ಕ್ ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ತೆರೆದಿರುತ್ತವೆ. ಎಲ್ಲ ವ್ಯಾಪಾರಿಗಳಿಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಇನ್ನು ಪ್ರತಿ ಭಾನುವಾರ ಕಂಪ್ಲೀಟ್ ಲಾಕ್ಡೌನ್ ಇರಲಿದ್ದು, ಜನರು ಮನೆಯಿಂದ ಹೊರ ಬರುವಂತಿಲ್ಲ. ಇನ್ನು ಬಸ್ ಗಳಲ್ಲಿ 30 ಜನರಿಗೆ ಪ್ರಯಾಣಿಸಲು ಮಾತ್ರ ಅವಕಾಶ ನೀಡಲಾಗಿದೆ. ತುರ್ತು ಸಂದರ್ಭ ಹೊರತುಪಡಿಸಿ ಅಂತರ್ ರಾಜ್ಯ ಸಂಚಾರ ಇರಲ್ಲ. ಈ ಕುರಿತು ಮೇ 31ರ ನಂತ್ರ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ ನೀಡಿದರು.
Advertisement
Advertisement
ಮದುವೆಗಳಲ್ಲಿ 50 ಜನಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಆಟೋ, ಕ್ಯಾಬ್ಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಟೋ, ಟ್ಯಾಕ್ಸಿಗಳಲ್ಲಿ ಚಾಲಕ ಹೊರತು ಪಡಿಸಿ ಇಬ್ಬರು ಪ್ರಯಾಣ ಮಾಡಬಹುದು. ಮ್ಯಾಕ್ಸಿಕ್ಯಾಬ್ ನಲ್ಲಿ ಚಾಲಕ ಹೊರತು ಪಡಿಸಿ ಮೂವರು ಪ್ರಯಾಣ ಮಾಡಬಹುದು. ಸಂಜೆ 7 ರಿಂದ ಬೆಳಗ್ಗೆ 7ರವರೆಗೆ ಕರ್ಫ್ಯೂ ಮುಂದುವರಿಯಲಿದೆ. ಹೊರ ರಾಜ್ಯದ ಜನರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು. ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಅವರಿಗೆ ಪ್ರವೇಶ ನೀಡಲಾಗುವುದು.
Advertisement
ಜಿಮ್ ಓಪನ್ ಮಾಡುವಂತಿಲ್ಲ, ಕ್ರೀಡಾಂಗಣ ತೆರಯಲಾಗುವುದು ಗುಂಪು ಗುಂಪಾಗಿ ಸೇರುವಂತಿಲ್ಲ. ಪಾನಿಪುರಿ, ಫಾಸ್ಟ್ ಫುಡ್ ಸೇರಿದಂತೆ ಬೀದಿ ಬದಿ ವ್ಯಾಪಾರ ನಡೆಸಬಹುದಾಗಿದೆ. ಉದ್ಯಾವನಗಳನ್ನು ಬೆಳಗ್ಗೆ 7 ರಿಂದ 9 ಮತ್ತು ಸಂಜೆ 5 ರಿಂದ 7ರವರೆಗೆ ಮಾತ್ರ ತೆರೆಯಬಹುದು. ಇನ್ನು ಹೋಮ್ ಕ್ವಾರಂಟೈನ್ ಗೆ ಸರ್ಕಾರ ಮೊದಲ ಆದ್ಯತೆ ನೀಡಲಿದೆ. ಕಂಟೇನ್ ಮೆಂಟ್ ಝೋನ್ ಗಳಲ್ಲಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಪಾಲನೆ ಮಾಡಲಾಗುವುದು. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.