– ಪರೀಕ್ಷೆಗೆ ಬಂದವರ ಬಾಳಲ್ಲಿ ಗಟ್ಟಿಮೇಳ
ಪಾಟ್ನಾ: ಬಿಹಾರದಲ್ಲಿ ಮೆಟ್ರಿಕ್ ಪರೀಕ್ಷೆಗಳು ಆರಂಭಗೊಂಡಿವೆ. ಪರೀಕ್ಷೆಗೆ ಬಂದಿದ್ದ ಜೋಡಿ ಎಕ್ಸಾಂಗೆ ಚಕ್ಕರ್ ಹಾಕಿ ಹೊಸ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ಬಿಹಾರದ ಕಟಿಹಾರದಲ್ಲಿ ನಡೆದಿದೆ.
ಗೌರಿ ಮತ್ತು ನಿತೀನ್ ಮದುವೆಯಾದ ಜೋಡಿ. ನಾಲ್ಕು ವರ್ಷಗಳ ಹಿಂದೆ ಗೌರಿ ಮತ್ತು ನಿತೀಶ್ ಪರಿಚಯ ಅನಾಮಧೇಯ ಕಾಲ್ ನಿಂದ ಆರಂಭಗೊಂಡಿತ್ತು. ಫೋನ್ ಕಾಲ್ ನಿಂದ ಇಬ್ಬರ ಪರಿಚಯ ಪ್ರೇಮವಾಗಿ ಬದಲಾಗಿತ್ತು. ಆದ್ರೆ ಇಬ್ಬರು ಒಮ್ಮೆಯೂ ನೇರವಾಗಿ ಭೇಟಿಯಾಗಿರಲಿಲ್ಲ. ಶನಿವಾರ ಮೆಟ್ರಿಕ್ ಪರೀಕ್ಷೆಗೆ ಬಂದಾಗ ಇಬ್ಬರ ಪರಿಚಯವಾಗಿದೆ. ಮುಖಾಮುಖಿ ಆಗುತ್ತಲೇ ಪರೀಕ್ಷೆಗೆ ಗೈರಾಗಿ ದೇವಸ್ಥಾನಕ್ಕೆ ತೆರಳಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Advertisement
Advertisement
ಗೌರಿ ಪರೀಕ್ಷೆಗೆ ಕುಟುಂಬಸ್ಥರ ಜೊತೆ ಬಂದಿದ್ದಳು. ಆದ್ರೆ ಕ್ಷಣ ಮಾತ್ರದಲ್ಲಿ ಮದುವೆ ಆಗಿ ಮಗಳು ಪ್ರತ್ಯಕ್ಷವಾದಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೆ ಯುವಕ ನಿತೀನ್ ಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
Advertisement
Advertisement
ಇತ್ತ ನಿತೀನ್ ಕುಟುಂಬಸ್ಥರು ಸ್ಥಳಕ್ಕಾಗಮಿಸಿದಾಗ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಠಾಣೆಯಲ್ಲಿ ಎರಡೂ ಕುಟುಂಬಗಳ ನಡುವೆ ಹೈಡ್ರಾಮಾ ನಡೆದಿದೆ. ಕೊನೆಗೆ ಪೊಲೀಸರು ಎರಡೂ ಕುಟುಂಬಗಳ ನಡುವೆ ರಾಜೀ ಪಂಚಾಯ್ತಿ ನಡೆಸಿ ನವಜೋಡಿಯನ್ನ ಕಳುಹಿಸಿಕೊಟ್ಟಿದ್ದಾರೆ.