Connect with us

Districts

ನಾಯಿ ಬೊಗಳಿದ್ದಕ್ಕೆ, ಗೇಟ್ ತರೆದು ಕಾಂಪೌಂಡ್ ಒಳಗೆ ಬಂದ ಗಜರಾಜ

Published

on

ಹಾಸನ: ನಾಯಿ ಬೊಗಳುವುದನ್ನು ಕೇಳಿ ಆನೆಯೊಂದು ರಾತ್ರಿ ವೇಳೆ ಮನೆಯ ಗೇಟ್ ತೆಗೆದು ಒಳಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ, ಉದ್ದೇವಾರ ಗ್ರಾಮದ ಸಮೀಪ ಅಂಬಿಕ ಎಸ್ಟೇಟ್ ಬಳಿ ಆನೆ ಬಂದಿದೆ. ಈ ವೇಳೆ ಅಲ್ಲೇ ಇದ್ದ ಮನೆಯೊಂದರ ಗೇಟ್ ಒಳಗಿದ್ದ ನಾಯಿಗಳು ಆನೆಯನ್ನು ಕಂಡು ಜೋರಾಗಿ ಬೊಗಳಿವೆ. ಈ ವೇಳೆ ಆನೆ ಗೇಟ್ ತೆರೆದು ಮನೆಯ ಕಾಂಪೌಂಡ್ ಒಳಗೆ ಬಂದಿದೆ.

ಆನೆ ಕಾಂಪೌಂಡ್ ಒಳಗೆ ಬರುತ್ತಿದ್ದಂತೆ ನಾಯಿಗಳು ಅಲ್ಲಿಂದ ಜಾಗ ಖಾಲಿ ಮಾಡಿದ್ದು, ನಂತರ ಆನೆ ತನ್ನ ಪಾಡಿಗೆ ತಾನು ವಾಪಸ್ ತೆರಳಿದೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ. ಈ ಭಾಗದಲ್ಲಿ ಆನೆ ಹಾವಳಿ ಅತಿಯಾಗಿದ್ದು ಬೆಳೆಯನ್ನು ನಾಶ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Click to comment

Leave a Reply

Your email address will not be published. Required fields are marked *