-ಹೆಚ್ಡಿಕೆ, ಬಿಎಸ್ವೈ ದಿಢೀರ್ ಭೇಟಿಯ ರಹಸ್ಯ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಮತ್ತು ಸಿಎಂ ಬದಲಾವಣೆ ಕೇಳಿರುವ ಶಾಸಕರಿಗೆ ಬಿಜೆಪಿ ಹೈಕಮಾಂಡ್ ಸಂದೇಶ ರವಾನಿಸಿದೆ ಎನ್ನಲಾಗಿದೆ.
ಕೆಲ ಲಿಂಗಾಯತ ಶಾಸಕರೇ ಸಿಎಂ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿದ್ದು, ವಯಸ್ಸಿನ ಕಾರಣ ನೀಡಿದ್ದಾರೆ ಎನ್ನಲಾಗಿದೆ. ಸಿಎಂ ಪ್ರವಾಸಕ್ಕೂ ಮುನ್ನವೇ ದೆಹಲಿಗೆ ಭೇಟಿ ನೀಡಿರುವ ಮಾಜಿ ಸಿಎಂ, ಸಚಿವ ಜಗದೀಶ್ ಶೆಟ್ಟರ್ ಹಿರಿಯ ನಾಯಕರನ್ನ ಭೇಟಿ ಮಾಡಿ, ನಾಯಕತ್ವ ಬದಲಾವಣೆ ಕುರಿತು ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ.
Advertisement
Advertisement
ಹೈ ಪ್ರಶ್ನೆಯ ಸಂದೇಶ: ಜಗದೀಶ್ ಶೆಟ್ಟರ್ ಅಭಿಪ್ರಾಯ ಕೇಳಿರುವ ಹೈಕಮಾಂಡ್, ಯಡಿಯೂರಪ್ಪ ಅವರನ್ನ ತೆಗೆದ್ರೆ ಸಿಎಂ ಗಾದಿಯಲ್ಲಿ ಯಾರನ್ನ ತಂದು ಕೂರಿಸೋದು? ಈಗಾಗಲೇ ಯಡಿಯೂರಪ್ಪನವರೇ ಪೂರ್ಣಾವಧಿಯ ಸಿಎಂ ಅಂತ ಘೋಷಣೆ ಮಾಡಲಾಗಿದೆ. ಈ ಸಮಯದಲ್ಲಿ ಸಿಎಂ ಬದಲಾವಣೆ ಮಾಡಿದ್ರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಪಕ್ಷದೊಳಗೆ ಶಾಸಕರ ಒತ್ತಡಗಳಿದ್ರೂ ಡಿಸೆಂಬರ್ ವರೆಗೆ ಸಿಎಂ ಬದಲಾವಣೆ ಇಲ್ಲ. ಒಂದು ವೇಳೆ ಯಡಿಯುರಪ್ಪರನ್ನ ಕೆಳಗಿಳಿಸಿದ್ರೆ ಲಿಂಗಾಯತ ಮತಬ್ಯಾಂಕ್ಗೆ ಹೊಡೆತ ಬೀಳಲ್ವಾ ಎಂದು ಹೈಕಮಾಂಡ್ ಪ್ರಶ್ನೆ ಮಾಡಿದೆ ಎನ್ನಲಾಗಿದೆ.
Advertisement
Advertisement
ಹೆಚ್ಡಿಕೆ ಭೇಟಿ: ಎರಡು ದಿನಗಳ ಹಿಂದೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪ ಅವರನ್ನ ಭೇಟಿಯಾಗಿದ್ದರು. ಈ ವೇಳೆ ಎಲ್ಲರನ್ನು ಹೊರಗೆ ಕಳುಹಿಸಿದ್ದ ಸಿಎಂ ಬಿಎಸ್ವೈ, ಜೆಡಿಎಸ್ ಸಹಕಾರ ಕೇಳಿದ್ದಾರೆ ಎನ್ನಲಾಗಿದೆ. ಬಿಜೆಪಿ ಬಂಡಾಯದ ಹಿನ್ನೆಲೆ ಹಕಾರ ತತ್ವ ಪಠಿಸಿದ್ದು, ಕುಮಾರಸ್ವಾಮಿ ಅವರು ನಿಮ್ಮ ಸಹಾಯಕ್ಕೆ ನಾನು ರೆಡಿ, ನಮ್ಮ ಸಹಾಯಕ್ಕೆ ನೀವು ರೆಡಿ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೊರೊನಾ, ಡ್ರಗ್ ಕೇಸ್ ಬಿರುಗಾಳಿ ನಡುವೆಯೇ ಬಿಎಸ್ವೈ ಕುರ್ಚಿಗೆ ಕಂಟಕ!
-ಸಿಎಂ ಗಾದಿಯಿಂದ ಬಿಎಸ್ವೈ ಇಳಿಸುವ ತಂತ್ರದಲ್ಲಿರುವ ಶಾಸಕರುhttps://t.co/0HSNAsVID3#BSYediyurappa #BJP #Karnataka #KannadaNews
— PublicTV (@publictvnews) September 14, 2020
ಈ ಎಲ್ಲ ಬೆಳವಣಿಗೆಗಳ ನಡುವೆ ಕುಮಾರಸ್ವಾಮಿ ಅವರನನ್ನ ಭೇಟಿಯಾಗುವ ಮೂಲಕ ಬಂಡಾಯಗಾರರಿಗೆ ಸಿಎಂ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಇತ್ತ ತಮಗೆ ಜೆಡಿಎಸ್ ಬೆಂಬಲ ಇರುವ ಬಗ್ಗೆ ಹೈಕಮಾಂಡ್ಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.