– ನಾವೇನು ಪಾಕಿಸ್ತಾನದವರಾ? ಚೀನಾದವರಾ?
ಬೆಂಗಳೂರು: ಮೇಕೆದಾಟು ವಿಚಾರದಲ್ಲಿ ಬಿಜೆಪಿಯದ್ದು ದ್ವಿಮುಖ ನೀತಿ ಅಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವೇನು ಪಾಕಿಸ್ತಾನದವರಾ? ಚೀನಾದವರಾ? ಅಮೆರಿಕಾದವರಾ? ನಾವು ಭಾರತೀಯರೇ. ಬಿಜೆಪಿಯವರಿಗೆ ಮಾತ್ರ ಭಾರತೀಯರು ಅನ್ನೋ ಗುತ್ತಿಗೆ ಕೊಟ್ಟಿಲ್ಲ. ನಾವು ಹುಟ್ಟಿರೋದು ಈ ಮಣ್ಣಿನಲ್ಲಿ ಅಂತ ಕಿಡಿಕಾರಿದರು.
Advertisement
ನಾನು ಭಾರತೀಯ ಅನ್ನೋದಕ್ಕಿಂತ ಮುಂಚೆ ನಾನು ಮೊದಲು ಕನ್ನಡಿಗ. ಕನ್ನಡಿಗನಾಗಿ ಕರ್ನಾಟಕಕ್ಕೆ ಆಗಿರೋ ಅನ್ಯಾಯದ ವಿರುದ್ಧ ಧ್ವನಿ ಎತ್ತೋದು ನನ್ನ ಕರ್ತವ್ಯ. ಅದನ್ನ ನಾನು ಮೇಕೆದಾಟು ವಿಚಾರದಲ್ಲಿ ಎತ್ತಿದ್ದೇನೆ ಅಂತ ಸಿ.ಟಿ.ರವಿಗೆ ತಿರುಗೇಟು ಕೊಟ್ಟರು.
Advertisement
Advertisement
ಸಿ.ಟಿ.ರವಿ ಅವರು ಭಾರತೀಯರು ಇರಬಹುದು. ಮೊದಲು ಕರ್ನಾಟಕ, ನನ್ನ ತಾಯಿ ನನಗೆ ಮೊದಲು ಮುಖ್ಯ. ನನ್ನ ತಾಯಿ ಕಾಪಾಡಬೇಕಾದದ್ದು ನನ್ನ ಕರ್ತವ್ಯ. ಅವರು ಭಾರತೀಯರ ರೋಲ್ ಮಾಡೋದು ಬೇರೆ. ನನ್ನ ತಾಯಿ ಉಳಿದುಕೊಂಡ್ರೆ ತಾನೇ ಭಾರತೀಯರ ತಾಯಿ ಉಳಿಸಿಕೊಳ್ಳೋದು. ಸಿ.ಟಿ.ರವಿ ಇದನ್ನ ಅರ್ಥ ಮಾಡಿಕೊಳ್ಳಲಿ ಅಂತ ಕುಮಾರಸ್ವಾಮಿ ಕೆಂಡಾಮಂಡಲವಾದ್ರು. ಇದನ್ನೂ ಓದಿ: 2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ‘ಮಿಷನ್ 123’: ಕುಮಾರಸ್ವಾಮಿ
Advertisement
ಮೇಕೆದಾಟು ವಿಚಾರದಲ್ಲಿ ಬಿಜೆಪಿಯದ್ದು ಇಬ್ಭಾಗ ನೀತಿ ಮಾಡುತ್ತಿದ್ದು, ಇದರಲ್ಲಿ ಸಂಶಯವೇ ಇಲ್ಲ. ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷದ ನಡವಳಿಕೆ ನೋಡಿದ್ದೇವೆ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡಿರೋದು ನೋಡಿದ್ದೇನೆ. ಹಾಸನದಲ್ಲಿ ಒಬ್ಬರು ನಮ್ಮ ಬಗ್ಗೆ ಮಾತಾಡಿದ್ದಾರೆ. ಅವರ ಪಕ್ಷ ಉಳಿಸಿಕೊಳ್ಳಲು ನಮ್ಮ ಪಕ್ಷವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಬಹಳ ದಿನ ನಡೆಯೋದಿಲ್ಲ ಅಂತ ಬಿಜೆಪಿ ವಿರುದ್ದ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಇಂದಿರಾ ಗಾಂಧಿ ಅವರ ಕುರಿತು ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್ಗೆ ಕೋಪ ಬಂದಿದೆ: ಸಿ.ಟಿ.ರವಿ
2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ 'ಮಿಷನ್ 123': ಕುಮಾರಸ್ವಾಮಿ
– ಬಿಜೆಪಿ ಖಾತೆ ಕಿತ್ತಾಟ ನಾಟಕ ಮಕ್ಕಳ ಆಟಿಕೆಯಂತಾಗಿದೆhttps://t.co/15SdxbOUC0#HDKumaraswamy #AssemblyElection2023 #Election2023 #KannadaNews #BJP #KarnatakaPolitics @hd_kumaraswamy @BJP4Karnataka @BSBommai @nimmapreetham
— PublicTV (@publictvnews) August 12, 2021