ನಾನು ಬದುಕುಳಿದೆ, ಆದ್ರೆ ಸುಶಾಂತ್‍ಗೆ ಆಗಲಿಲ್ಲ: ಪ್ರಕಾಶ್ ರೈ

Public TV
1 Min Read
Sushant Prakash

-ನೆಪಟಿಸಂ ಬಗ್ಗೆ ರೈ ಮಾತು

ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಟ ಪ್ರಕಾಶ್ ರೈ ಸಂತಾಪ ಸೂಚಿಸಿ, ನೆಪಟಿಸಂ ಬಗ್ಗೆ ಮಾತನಾಡಿದ್ದಾರೆ.

ಸುಶಾಂತ್ ನೆಪಟಿಸಂ ಬಗ್ಗೆ ಮಾತನಾಡಿರುವ ವಿಡಿಯೋ ಅಪ್ಲೋಡ್ ಮಾಡಿಕೊಂಡು ಟ್ವೀಟ್ ಮಾಡಿರುವ ಪ್ರಕಾಶ್ ರೈ, ನಾನು ನೆಪಟಿಸಂ (ತಾರತಮ್ಯ) ಅನುಭವಗಳನ್ನು ಎದುರಿಸಿ ಬಂದಿದ್ದೇನೆ. ನಾನು ಬದುಕುಳಿದೆ. ನನ್ನ ಗಾಯಗಳು ಮನಸ್ಸಿಗಿಂತ ಆಳವಾಗಿವೆ. ಆದ್ರೆ ಮಗು ಸುಶಾಂತ್ ಸಿಂಗ್ ರಜಪೂತ್‍ಗೆ ಇದನ್ನು ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ನಾವು ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಇಂತಹ ಕನಸುಗಳನ್ನು ಕೊನೆಯಾಗೋದನ್ನ ತಡೆಯಬೇಕು ಎಂದು ಬರೆದುಕೊಂಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್‍ನಲ್ಲಿ ತಾರತಮ್ಯದ ಜನರು ಪ್ರಶ್ನೆ ಎತ್ತುತ್ತಿದ್ದಾರೆ. ಸುಶಾಂತ್‍ನನ್ನು ಮಾನಸಿಕವಾಗು ಕುಗ್ಗಿಸಿ ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಯ್ತು. ಇದು ಸೂಸೈಡ್ ಅಲ್ಲ, ಪೂರ್ವ ನಿಯೋಜಿತ ಕೊಲೆ ಎಂದು ನಟ ಕಂಗನಾ ರಣಾವತ್ ಆರೋಪಿಸಿದ್ದರು.

Share This Article