LatestMain PostNational

ನಾನಿನ್ನು ನಿರ್ಮಾಣ ಹಂತದಲ್ಲಿದ್ದೇನೆ, ನಿಮ್ಮ ತಾಳ್ಮೆಗೆ ಧನ್ಯವಾದಗಳು- ಸ್ಮೃತಿ ಇರಾನಿ

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ವಿಶೇಷ ಪೋಸ್ಟ್ ಗಳ ಮೂಲಕ ಸಾಕಷ್ಟು ಸದ್ದು ಮಾಡುತ್ತಾರೆ. ಇವರ ಪೋಸ್ಟ್‍ಗಾಗಿಯೇ ಹಲವು ಅಭಿಮಾನಿಗಳು ಕಾಯುತ್ತಿರುತ್ತಾರೆ. ಆ ರೀತಿಯ ಹಾಸ್ಯ, ಸ್ಪೂರ್ತಿದಾಯಕ ಪೋಸ್ಟ್ ಗಳನ್ನು ಮಾಡುತ್ತಾರೆ. ಅದೇ ರೀತಿ ಇದೀಗ ಇನ್‍ಸ್ಟಾಗ್ರಾಮ್‍ನಲ್ಲಿ ಅವರೊಂದು ಪೋಸ್ಟ್ ಹಾಕಿದ್ದು, ಸಖತ್ ವೈರಲ್ ಆಗಿದೆ.

ಈ ಬಾರಿಯ ಅವರ ಪೋಸ್ಟ್ ತುಂಬಾ ಹಾಸ್ಯಮಯ ಹಾಗೂ ಜೀವನ ಪಾಠವನ್ನು ಹೇಳುವಂಥದ್ದಾಗಿದ್ದು, ನಮ್ಮನ್ನು ನಾವು ಹೇಗೆ ಸುಧಾರಿಸಿಕೊಳ್ಳಬೇಕು, ನಮಗಾಗಿ ಸಮಯವನ್ನು ಮಾಡಿಕೊಳ್ಳುವ ಕುರಿತದ್ದಾಗಿದೆ. ಇಂಗ್ಲಿಷ್ ಸಾಲುಗಳನ್ನು ಬರೆದಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದು, ಪ್ರಸ್ತುತ ನಾನು ನಿರ್ಮಾಣ ಹಂತದಲ್ಲಿದ್ದೇನೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

 

View this post on Instagram

 

🤫

A post shared by Smriti Irani (@smritiiraniofficial) on

ಈ ಕುರಿತು ಅನೇಕರು ಪ್ರತಿಕ್ರಿಯಿಸುತ್ತಿದ್ದು, ಕಮೆಂಟ್‍ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ 22,800 ಜನ ಪೋಸ್ಟ್ ಲೈಕ್ ಮಾಡಿದ್ದಾರೆ. ಹೆಚ್ಚು ಜನ ಶೇರ್ ಮಾಡುತ್ತಿದ್ದಂತೆ ಪೋಸ್ಟ್ ವೈರಲ್ ಆಗಿದ್ದು, ನಟ ಆಯುಷ್ಮಾನ್ ಖುರಾನಾ ಸೇರಿದಂತೆ ಹಲವರು ಪೋಸ್ಟ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

ಮ್ಯಾಡಮ್ ನೀವೇ ಒಂದು ಸ್ಫೂರ್ತಿ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಅಮೇಜಿಂಗ್ ಎಂದು ಹೇಳಿದ್ದಾರೆ. ಹೀಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ರೀತಿಯ ಹಲವು ಪೋಸ್ಟ್ ಗಳನ್ನು ಶೇರ್ ಮಾಡುವ ಮೂಲಕ ಸ್ಮೃತಿ ಇರಾನಿ ಅವರು ಮೆಚ್ಚುಗೆ ಪಡೆದಿದ್ದಾರೆ. ಅಲ್ಲದೆ ಇಂತಹದೇ ಪೋಸ್ಟ್ ಗಳ ಮೂಲಕ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಕಾಲೆಳೆಯುತ್ತಾರೆ.

Leave a Reply

Your email address will not be published. Required fields are marked *

Back to top button