ಕೋಲಾರ: ಆಹಾರ ನೀರು ಹರಸಿ ನಾಡಿನತ್ತ ಹೆಜ್ಜೆ ಹಾಕುತ್ತಿರುವ ಜಿಂಕೆ, ಕೃಷ್ಣ ಮೃಗಗಳು ನಾಯಿ ದಾಳಿಯಿಂದ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.
Advertisement
ನಾಯಿಗಳ ದಾಳಿಗೆ ತುತ್ತಾಗಿ ಮೃತಪಡುತ್ತಿರುವ ಜಿಂಕೆಗಳ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಕೋಲಾರದಲ್ಲಿ ಹೆಚ್ಚಾಗುತ್ತಲೆ ಇದೆ. ಕೋಲಾರ ಜಿಲ್ಲೆಯ ಕೆಜಿಎಫ್ ಸುತ್ತಮುತ್ತ ಸಾವಿರಾರು ಕೃಷ್ಣ ಮೃಗಗಳು ಹಾಗೂ ಜಿಂಕೆಗಳು ವಾಸ ಮಾಡುತ್ತಿದ್ದು, ಅವುಗಳಿಗೆ ರಕ್ಷಣೆ ಇಲ್ಲದಂತ್ತಾಗಿದೆ. ಇದನ್ನೂ ಓದಿ: ರಾತ್ರೋ ರಾತ್ರಿ ಲೇಔಟ್ನಲ್ಲಿ ಗುಡಿಸಲು ನಿರ್ಮಾಣ
Advertisement
Advertisement
ಬಂಗಾರಪೇಟೆ ತಾಲ್ಲೂಕಿನ ದೊಡ್ಡ ವಲಗಮಾದಿ ಹಾಗೂ ಕೆಜಿಎಫ್ ನಗರಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಜಿಂಕೆಗಳ ಸಾವು ಹೆಚ್ಚಾಗುತ್ತಲೆ ಇದೆ. ಮೇವಿಗಾಗಿ ನಗರ ವ್ಯಾಪ್ತಿಗೆ ಬಂದಾಗ ನಾಯಿಗಳ ದಾಳಿಯಿಂದ ಮೃತಪಟ್ಟಿದ್ದು, ಸಾವಿರಾರು ಜಿಂಕೆಗಳು ವಾಸವಿರುವ ಅರಣ್ಯ ಪ್ರದೇಶದಲ್ಲಿ ನಾಯಿಗಳ ದಾಳಿಗೆ ಸಾವನ್ನಪ್ಪುತ್ತಿದ್ರು ಅರಣ್ಯ ಇಲಾಖೆ ನಿರ್ಲಕ್ಷ್ಯವಹಿಸುತ್ತಿದೆ. ತಲೆ ಕೆಡೆಸಿಕೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
Advertisement