– ಕಾಮುಕರ ಕೈಯಿಂದ ಪಾರಾದ ಮಗಳು ಹೇಳಿದ್ದೇನು..?
ಡಿಸ್ಪುರ್: ಆಸ್ಪತ್ರೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರು ಕಾಮುಕರು ಮಹಿಳೆಯನ್ನು ಅತ್ಯಾಚಾರವೆಸಗಿದ ಘಟನೆ ಅಸ್ಸಾಂನ ಚರಾಡಿಯೋ ಜಿಲ್ಲೆಯಲ್ಲಿ ನಡೆದಿದೆ.
Advertisement
ಮಹಿಳೆ ತನ್ನ ಮಗಳೊಂದಿಗೆ ಕೊರೊನಾ ಟೆಸ್ಟ್ ಮಾಡಿಸಲೆಂದು ಆಸ್ಪತ್ರೆಗೆ ತೆರಳಿದ್ದರು. ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ಎಂದು ವರದಿ ಬಂದ ಬಳಿಕ ಮಹಿಳೆಗೆ ಆಸ್ಪತ್ರೆಯವರು ಅಂಬುಲೆನ್ಸ್ ನೀಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆ ಮಗಳೊಂದಿಗೆ ನಡೆದುಕೊಂಡು ಮನೆ ಕಡೆ ವಾಪಸ್ಸಾಗುತ್ತಿದ್ದರು. ಹೀಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇಬ್ಬರು ಕಾಮುಕರು ಮಹಿಳೆಯನ್ನು ಕಿಡ್ನಾಪ್ ಮಾಡಿದ್ದಾರೆ. ನಂತರ ಟೀ ಗಾರ್ಡನ್ ಕಡೆ ಕರೆದೊಯ್ದು ತಮ್ಮ ಕಾಮ ತೃಷೆ ತೀರಿಸಿಕೊಂಡಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಮಹಿಳೆಯ ಮಗಳು ಪ್ರತಿಕ್ರಿಯಿಸಿ, ನಮ್ಮ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟೆಸ್ಟ್ ವರದಿಯಲ್ಲಿ ನಮಗೆ ನೆಗೆಟಿವ್ ಬಂದ ನಂತರ ಆಸ್ಪತ್ರೆ ಸಿಬ್ಬಂದಿ ನಮ್ಮನ್ನು ಮನೆಗೆ ತೆರಳುವಂತೆ ತಿಳಿಸಿದ್ದಾರೆ. ರಾತ್ರಿಯಾಗಿದ್ದರಿಂದ ಮನೆಗೆ ಹೋಗಲು ಅಂಬುಲೆನ್ಸ್ ಕೇಳಿದೆವು. ಆದರೆ ಅವರು ನಮಗೆ ಅಂಬುಲೆನ್ಸ್ ನೀಡಲು ನಿರಾಕರಿಸಿದರು. ಹೀಗಾಗಿ ಇಂದು ಆಸ್ಪತ್ರೆಯಲ್ಲಿ ಉಳಿದುಕೊಂಡು ಬೆಳಗ್ಗೆ ಹೋಗುತ್ತೇವೆ ಎಂದು ಹೇಳಿದಾಗಲೂ ಸಿಬ್ಬಂದಿ ಒಪ್ಪಲಿಲ್ಲ ಎಂದಳು.
Advertisement
ನಸುಕಿನ ಜಾವ 2.30ರ ಸುಮಾರಿಗೆ ನಾವು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದೆವು. ಆಸ್ಪತ್ರೆಯಿಂದ ನಮ್ಮ ಮನೆಗೆ ತೆರಳಲು ಸುಮಾರು 25 ಕಿ.ಮೀ ದೂರವಿದೆ. ಹೀಗಾಗಿ ನಾವು ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದೆವು. ಈ ವೇಳೆ ಇಬ್ಬರು ವ್ಯಕ್ತಿಗಳು ನಮ್ಮನ್ನು ಫಾಲೋ ಮಾಡುತ್ತಾ ಬಂದಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ನಾವು ಓಡಿ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಅಮ್ಮ ಕಾಮುಕರ ಕೈಗೆ ಸಿಕ್ಕಿಹಾಕಿಕೊಂಡರು. ಅಮ್ಮನನ್ನು ಅಲ್ಲಿಂದ ಕಿಡ್ನಾಪ್ ಮಾಡಿದರು. ಇತ್ತ ನಾನು ಹೇಗೋ ಅವರ ಕೈಯಿಂದ ತಪ್ಪಿಸಿಕೊಂಡು ಬಂದು ಗ್ರಾಮಸ್ಥರಿಗೆ ಘಟನೆ ಬಗ್ಗೆ ವಿವರಿಸಿದೆ. ಘಟನೆ ನಡೆದ ಸುಮಾರು 2 ಗಂಟೆಯ ನಂತರ ತಾಯಿ ಸಿಕ್ಕಿದರು ಎಂದು ಸಂತ್ರಸ್ತೆಯ ಮಗಳು ವಿವರಿಸಿದ್ದಾಳೆ.
ಘಟನೆ ಸಂಬಂಧ ಆರೋಪಿಗಳ ಮತ್ತೆಗೆ ಬಲೆ ಬೀಸಲಾಗಿದ್ದು, ತನಿಖೆ ಮುಂದುವರಿದಿದೆ. ಇತ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಡಪಸಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲಿಸ್ ಅಧಿಕಾರಿಗ ಸುಧಾಕರ್ ಸಿಂಗ್ ಹೇಳಿದ್ದಾರೆ.