ಬೆಂಗಳೂರು: ಆಗ ತಾನೇ ಹುಟ್ಟಿದ ನವಜಾತ ಶಿಶುವನ್ನು ಕೂಡ ಮಹಾಮಾರಿ ಕೊರೊನಾ ಬಿಡಲಿಲ್ಲ. ಹುಟ್ಟಿದ ಮೂರು-ನಾಲ್ಕು ಗಂಟೆಯಲ್ಲೇ ಕೊರೊನಾಗೆ ಕಂದಮ್ಮ ಸಾವನ್ನಪ್ಪಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವನ್ನಪ್ಪಿದೆ. ದೊಡ್ಡಬಳ್ಳಾಪುರ ಮೂಲದ ದಂಪತಿಗೆ ಮಗು ಜನಿಸಿತ್ತು. ತಾಯಿ ಒಂದು ವಾರದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು ಹೆರಿಗೆಯಾಗಿದೆ. ಆದರೆ ಜನಿಸಿದ ಮೂರ್ನಾಲ್ಕು ಗಂಟೆಗಳಲ್ಲೇ ಕಂದಮ್ಮ ಕೊನೆಯುಸಿರೆಳೆದಿದೆ. ಆಗ ತಾನೇ ಹುಟ್ಟಿದ ಮಗುವಿಗೆ ಕೊರೊನಾ ದೃಢವಾಗಿತ್ತು.
Advertisement
Advertisement
ಕೊರೊನಾದಿಂದ ಮೃತಪಟ್ಟ ಮಗುವಿಗೆ ಅಂತ್ಯ ಸಂಸ್ಕಾರವನ್ನು ಅಂಬುಲೆನ್ಸ್ ಸಿಬ್ಬಂದಿಯೇ ನೆರವೇರಿಸಿದ್ದಾರೆ. ಮಗುವಿನ ತಾಯಿಗೆ ಕೊರೊನಾ ಪಾಸಿಟಿವ್ ಇದೆ. ಮಗುವಿನ ತಂದೆ ಅಥವಾ ಕುಟುಂಬದವರು ಯಾರೂ ಮಗುವನ್ನು ನೋಡಲು ಬಂದಿಲ್ಲ. ಹೀಗಾಗಿ ಆಸ್ಪತ್ರೆಯ ಅಂಬುಲೆನ್ಸ್ ಸಿಬ್ಬಂದಿಯೇ ಮಗುವಿನ ಅಂತ್ಯಸಂಸ್ಕಾರ ಮಾಡಿದ್ದಾರೆ.
Advertisement
ಚಾಮರಾಜಪೇಟೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಶಾಸಕ ಜಮೀರ್ ತಂಡದವರು ಮತ್ತು ಅಂಬುಲೆನ್ಸ್ ಸಿಬ್ಬಂದಿ ಹಿಂದೂ ಸಂಪ್ರದಾಯದ ಪ್ರಕಾರ ಮಗುವಿನ ಅಂತ್ಯ ಸಂಸ್ಕಾರ ಮಾಡಿದ್ದಾರೆ.