ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿಯನ್ನು ಕಾಣಲು ಇಂದು ಅವರ ಪೋಷಕರು ಜೈಲಿನತ್ತ ತೆರಳಿದ್ದು, ಅವಕಾಶ ಸಿಗದೆ ವಾಪಸ್ಸಾಗಿದ್ದಾರೆ.
Advertisement
ಈ ವೇಳೆ ಮಾದ್ಯಮಗಳ ಜೊತೆ ಮಾತನಾಡಿದ ರಾಗಿಣಿ ತಾಯಿ ರೋಹಿಣಿ, ನನ್ನ ಮಗಳು ಹತ್ತು ವರ್ಷಗಳಿಂದ ಕನ್ನಡ ಇಂಡಸ್ಟ್ರಿಯಲ್ಲಿ ದುಡಿದಿದ್ದಾಳೆ. ನಮ್ಮ ಬಳಿ ಇರುವುದು ಒಂದೇ ಫ್ಲ್ಯಾಟ್. ಮಾಧ್ಯಮಗಳಲ್ಲಿ ಮೂರು ಮೂರು ಫ್ಲ್ಯಾಟ್ ಗಳಿವೆ ಎಂದು ಬಿಂಬಿಸಲಾಗುತ್ತಿದೆ. ನಾವು ಇಡಿ ಗೆ ಈಗಾಗಲೆ ಮಾಹಿತಿ ನೀಡಿದ್ದೇವೆ. ಆಕೆ ಹೆಣ್ಣು ಸಿಂಹ ಇದ್ದ ಹಾಗೆ. ನಾವು ಯಾವುದಕ್ಕು ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ಇದೇ ವೇಳೆ ರಾಗಿಣಿಪರ ವಕೀಲ ಕಲ್ಯಾಣ್ ಮಾತನಾಡಿ, ರಾಗಿಣಿ ನೋಡೋಕೆ ನನಗೆ ಪರ್ಮಿಷನ್ ಇದೆ. ಆದರೆ ಸದ್ಯ ಕೊವಿಡ್ ಇರೋದ್ರಿಂದ ಸ್ವಲ್ಪ ರಿಸ್ಟ್ರಿಕ್ಟ್ ಇದೆ. ಇದರ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರ ಕುಟುಂಬಸ್ಥರಿಗೆ ಅವಕಾಶ ಇಲ್ಲ ಅಂತ ಹೇಳ್ತಿದ್ದಾರೆ. ರಿಕ್ವೆಸ್ಟ್ ಮಾಡ್ತೀವಿ. ಬಿಟ್ರೆ ಅವರು ನೋಡ್ತಾರೆ ಇಲ್ಲಾ ಅಂದ್ರೆ ಬ್ಯಾಡ್ ಲಕ್. ನಾಳೆ ಕೋರ್ಟಿನಲ್ಲಿ ವಿಚಾರಣೆ ಇದೆ. ಕಾನೂನು ರೀತಿ ಮುಂದೆ ಹೋಗ್ತೇವೆ ಎಂದರು.
Advertisement
ಜೈಲುಪಾಲಾಗಿರುವ ಮಗಳು ರಾಗಿಣಿಯನ್ನು ಕಾಣಲು ವಕೀಲರ ಸಮೇತ ತಂದೆ- ತಾಯಿ ಬಂದಿದ್ದರು. ಆದರೆ ಜೈಲು ಅಧಿಕಾರಿಗಳು ರಾಗಿಣಿ ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಅವರು ವಾಪಸ್ ಹೋಗಿದ್ದಾರೆ.
ಇತ್ತ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೂ ಜೈಲು ಅಧಿಕಾರಿಗಳ ಬಳಿ ನಟಿ ರಾಗಿಣಿ ಮನವಿ ಮಾಡಿಕೊಂಡರು. ಹೋಗಾಗಿ ವೈದ್ಯರಿಂದ ರಾಗಿಣಿ ಆರೋಗ್ಯ ತಪಾಸಣೆ ಮಾಡಲು ಜೈಲಧಿಕಾರಿಗಳು ಸೂಚನೆ ನೀಡಿದರು. ಬೆಳಗ್ಗಿನಿಂದಲೂ ತಿಂಡಿ ಮಾಡದೆ ಸುಮ್ಮನೆ ಕುಳಿತಿದ್ದ ರಾಗಿಣಿ, ಯಾವುದೇ ಸಿಬ್ಬಂದಿ ಜೊತೆನೂ ಮಾತನಾಡದೆ ಮೌನಕ್ಕೆ ಶರಣಾಗಿದ್ದರು.
ಪರಪ್ಪನ ಅಗ್ರಹಾರ ಕಾರಾಗೃಹದ ಕ್ವಾರಂಟೈನ್ ಕೇಂದ್ರದಲ್ಲಿರೋ ನಟಿ ರಾಗಿಣಿಗೆ ಮಧ್ಯಾಹ್ನ ಜೈಲು ಸಿಬ್ಬಂದಿ ಚಪಾತಿ, ಪಲ್ಯ ಅನ್ನ ಸಾಂಬಾರ್ ನೀಡಿದ್ದು, ಅದನ್ನು ಸೇವಿಸಿದ್ದಾರೆ. ಬೆನ್ನು ನೋವು ಸುಸ್ತು ಹಿನ್ನೆಲೆ ರಾಗಿಣಿಗೆ ವೈದ್ಯ ಉಮಾ ಚಿಕಿತ್ಸೆ ನೀಡಿದರು. ಈ ವೇಳೆ ತುಂಬಾ ಸುಸ್ತಾಗಿದ್ದೀರಿ ಮೊದಲು ಆಹಾರ ಸೇವನೆ ಮಾಡಿ ಅಂತ ನಟಿಗೆ ವೈದ್ಯರ ಸೂಚನೆ ನೀಡಿದರು. ಊಟದ ನಂತರ ನಿದ್ರೆಗೆ ಜಾರಿದ್ದರು.