– ನನಗೆ ಇಡಿ ನೋಟಿಸ್ ಕೊಟ್ಟಿಲ್ಲ
– ನಾನು ಯಾರ ಮನೆಯಲ್ಲೂ ಲೂಟಿ ಮಾಡಿಲ್ಲ
ಬೆಂಗಳೂರು: ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ಇಡಿಯವರು ಬಂದಿದ್ದಾರೆ. ಮನೆ ವಿಚಾರಕ್ಕೆ ಅವರು ಬಂದಿದ್ರು. ಯಾವಾಗ ಮನೆ ಕಟ್ಟಿದ್ದೀರಿ, ಯಾವಾಗ ಖರೀದಿಸಿದ್ದೀರಿ. ಅದರ ಅವಂಟ್ ಡೀಟೆಲ್ಸ್ ಎಲ್ಲಿ ಅಂತ ಕೇಳಿದ್ರು. ನಾನು ಅವರಿಗೆ ಎಲ್ಲಾ ಮಾಹಿತಿಗಳನ್ನು ನೀಡಿದ್ದೇನೆ. ನನ್ನ ಎಲ್ಲಾ ಸ್ತಿ ಬಡವರ ಬಳಿಯೇ ಇದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
Advertisement
ಇಡಿ ದಾಳಿ ಬಳಿಕ ಮೊದಲ ಬಾರಿ ಮಾಧ್ಯಮಗಳೀಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ದಾಖಲೆಗಳನ್ನು ನೀಡಿದ ಬಳಿಕ ಅವರು ಸಮಾಧಾನ ಆಗಿ ನಾವು ಕರೆದಾಗ ಬರಬೇಕು ಅಂತ ಹೇಳಿ ಹೋಗಿದ್ದಾರೆ. ನೋಟಿಸ್ ಏನೂ ಕೊಟ್ಟಿಲ್ಲ. ಸಹೋದರರನ್ನು ತನಿಖೆ ಮಾಡಿಲ್ಲ. ನನ್ನ ಮನೆ ಹುಡುಕಾಡಿದರು ಅಷ್ಟೆ. ಒಟ್ಟಿನಲ್ಲಿ ಅವರು ಏನಿ ನಿರೀಕ್ಷೆ ಇಟ್ಕೊಂಡು ಬಂದಿದ್ದಾರೋ ಆ ನಿರೀಕ್ಷೆಗೆ ತಕ್ಕಂತೆ ಮನೆಯಲ್ಲಿ ಏನೂ ಸಿಕ್ಕಿಲ್ಲ. ನಾನು ಲೂಟಿ ಮಾಡಿಲ್ಲ. ಅಭಿಮಾನಿಗಳೇ ನನ್ನ ಆಸ್ತಿ. ಕೇಳಿದ ಎಲ್ಲ ದಾಖಲೆ ಕೊಟ್ಟಿದ್ದೀನಿ ಎಂದರು. ಇದನ್ನೂ ಓದಿ: ಶಾಸಕ ಜಮೀರ್ಗೆ ಇಡಿ ಶಾಕ್ – ಸತತ 23 ಗಂಟೆಗಳ ಕಾಲ ನಡೆದ ದಾಳಿ ಅಂತ್ಯ
Advertisement
Advertisement
3-4 ದೂರು ಬಂದಿತ್ತಂತೆ. ನನ್ನ ವ್ಯವಹಾರ ಎಲ್ಲ ವೈಟ್ ಅಮೌಂಟ್ ಎಂದಿದ್ದಾರೆ. ಎಲ್ಲರದ್ದೂ ನನ್ನ ಮೇಲೆಯೇ ಕಣ್ಣು. ರಾಜಕೀಯದಲ್ಲಿ ಶತ್ರುಗಳು ಸಹಜ. ಐಎಂಎ ಬಗ್ಗೆ ಚರ್ಚೆಯೇ ಆಗಿಲ್ಲ. ಅಧ್ಯಕ್ಷರಿಗೆ ಧನ್ಯವಾದಗಳು. ಮನೆ ಕಟ್ಟಲು 7 ವರ್ಷ ಆಗಿದೆ. ಮನೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದ್ರು ಕೊಟ್ಟಿದ್ದೀನಿ. ನನ್ನ ಮನೆ ಐಷಾರಾಮಿ ಆಗಿದೆ ಎಂದು ತಿಳಿಸಿದ್ದಾರೆ.
Advertisement
ನನ್ನ 2006ರಲ್ಲಿ ಜಾಗ ತಗೆದುಕೊಂಡಿದ್ದೆ. ನನ್ನ ಮನೆ ಕಟ್ಟಲು 7 ವರ್ಷ ಆಗಿದೆ. ಐಎಂಎ ವಿಚಾರವಾಗಿ ದಾಳಿ ನಡೆದಿಲ್ಲ. ಇಡಿ ಅಧಿಕಾರಿಗಳು ಕೇಳಿದ ದಾಖಲೆ ಕೊಟ್ಟಿದ್ದೇನೆ. ರೋಷನ್ ಬೇಗ್ ನಿವಾಸದ ದಾಳಿ ಬಗ್ಗೆ ಗೊತ್ತಿಲ್ಲ. ನಾನು ಯಾರ ಮನೆಯಲ್ಲೂ ಲೂಟಿ ಮಾಡಿಲ್ಲ. ನಾನು ದುಡಿದು ಸಂಪಾದನೆ ಮಾಡಿರುವೆ ಎಂದು ತಿಳಿಸಿದರು.