ಉಡುಪಿ: ಮಂತ್ರಿ ಮಂಡಲ ವಿಸ್ತರಣೆ ಕುರಿತಾಗಿ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಮೌನವ್ರತಕ್ಕೆ ಜಾರಿದ್ದೇನೆ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಪಬ್ಲಿಕ್ ಟಿವಿಗೆ ಹೇಳಿದರು.
ಕುಂದಾಪುರದ ವಾಜಪೇಯಿ ಖ್ಯಾತಿಯ, ಐದು ಬಾರಿ ನಿರಂತರವಾಗಿ ಗೆದ್ದ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಈ ಬಾರಿಯಾದರೂ ಸಚಿವ ಸ್ಥಾನ ಕೊಡಿ ಎಂಬ ಕೂಗು ಈ ಬಾರಿ ಜೋರಾಗಿತ್ತು. ಹಾಲಾಡಿ ಬೆಂಬಲಿಗರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದರು. ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮನೆಯ ಮುಂದೆ ಜನಾಗ್ರಹ ಆಂದೋಲನ ನಡೆಸಿದರು. ಸಚಿವ ಸ್ಥಾನದಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ವಂಚಿತರಾದ ವಿಚಾರಕ್ಕೆ ಸಂಬಂಧಿಸಿದಂತೆ ಫೋನ್ ಮೂಲಕ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: Exclusive: ಉಸಿರಿರೋತನಕ ಕೇಳಿ ಸಚಿವ ಸ್ಥಾನ ಪಡೆಯಲ್ಲ- ಕುಂದಾಪುರದ ವಾಜಪೇಯಿ ಹಾಲಾಡಿ ನೇರ ನುಡಿ
Advertisement
Advertisement
ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡಲ್ಲ. ನನ್ನದು ಏನಿದ್ದರೂ ಮೌನ ವೃತ. ಆಸೆಯೇ ದುಃಖಕ್ಕೆ ಕಾರಣ ಎಂದು ಬುದ್ಧ ಹೇಳಿದ್ದಾನೆ. ನಾನು ಬರುವಾಗ ಏನನ್ನೂ ತಂದಿಲ್ಲ. ನಾನು ಹೋಗುವಾಗ ಬರಿಗೈಲಿ ಹೋಗುವವನು. ಅಲೆಗ್ಸಾಂಡರ್ ಕಥೆ ನಿಮಗೆ ಗೊತ್ತಲ್ವಾ? ನನ್ನ ಪರವಾಗಿ ಪ್ರತಿಭಟನೆ ಮಾಡೋದು ಧರ್ಮವಲ್ಲ. ಸಮಾಜದ ಒಳಿತಿಗಾಗಿ ಮಾತ್ರ ಪ್ರತಿಭಟನೆ ಮಾಡಬೇಕು. ಸರ್ಕಾರ ದುರಾಡಳಿತದ ಮಾತ್ರ ಪ್ರತಿಭಟನೆ ಮಾಡಬೇಕು. ಇವತ್ತು ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಮುಂದಿನ ನಿರ್ಧಾರಗಳನ್ನು ಪರಮಾತ್ಮನೇ ಬಲ್ಲ. ಒಂದು ಬಾರಿ ನನ್ನನ್ನು ಪ್ರಮೋಶನ್ ಗೆ ಕರೆದು ಡಿಮೋಶನ್ ಮಾಡಿದ್ರು ಎಂದು ಹಳೆಯ ನೋವನ್ನು ಮತ್ತೆ ಕೆದಕಿಕೊಂಡರು.