ಕೊಪ್ಪಳ: ಸರ್ಕಾರ ಬೆಳಗ್ಗೆ ಕೊಟ್ಟು ಸಾಯಂಕಾಲ ಅಧ್ಯಕ್ಷ ಸ್ಥಾನ ಕಸಿದುಕೊಂಡಿತ್ತು. ಯಾವುದೇ ಅಸಮಾಧಾನ ಇಲ್ಲ ಅಂತ ಶಾಸಕ ಬಸವರಾಜ್ ದಡೇಸೂಗೂರು ಹೇಳಿದ್ರು.
ರಾಜ್ಯ ಬಿಜೆಪಿ ಸರ್ಕಾರ, ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ರು. ರಾಜ್ಯ ಸರ್ಕಾರದ 24 ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಸ್ಥಾನವನ್ನು ನೇಮಿಸಲಾಗಿತ್ತು. ಕೊಪ್ಪಳ ಜಿಲ್ಲೆಯ ಇಬ್ಬರು ಶಾಸಕರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿಕೊಂಡು ಆದೇಶ ಹೊರಡಿಸಲಾಗಿತ್ತು. ಇದನ್ನೂ ಓದಿ: ನಾಲ್ವರನ್ನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೈ ಬಿಟ್ಟ ಸರ್ಕಾರ
Advertisement
Advertisement
ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದ ಪರಣ್ಣ ಮನವಳ್ಳಿ ಅವರನ್ನು ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ರು. ಶಾಸಕ ಬಸವರಾಜ ದಡೇಸೂಗೂರುರನ್ನು ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಪರಣ್ಣ ಮುನವಳ್ಳಿರನ್ನ ರಾಜ್ಯ ಹಣಕಾಸು ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಲಾಗಿತ್ತು. ಇದನ್ನೂ ಓದಿ: 24 ಬಿಜೆಪಿ ಶಾಸಕರಿಗೆ ಒನ್ ಇಯರ್ ಗಿಫ್ಟ್ ನೀಡಿದ ಸಿಎಂ
Advertisement
Advertisement
ಆದರೆ ಸಂಜೆ ಹೊತ್ತಿಗೆ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಸವರಾಜ ದಡೆಸೂಗೂರನ್ನ ನೇಮಿಸಿದ ನಿಗಮ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಿದ್ರು. ಇದಕ್ಕೆ ಸ್ವತಃ ಬಸವರಾಜ್ ದಡೇಸೂಗೂರ್ ಪ್ರತಿಕ್ರಿಯಿಸಿ, ನನಗೆ ಯಾವುದೇ ಅಸಮಾಧಾನವಿಲ್ಲ ಮುಂದೆ ಮಂತ್ರಿ ಸ್ಥಾನ ಕೊಡಬಹುದು ಎಂದು ಹೇಳಿದ್ರು.
ಅಧ್ಯಕ್ಷ ಸ್ಥಾನ ಕಸಿದುಕೊಂಡಿದ್ದರ ಹಿಂದೆ ಮುಖ್ಯಮಂತ್ರಿಗಳಿಗೆ ಹಲವಾರು ಒತ್ತಡಗಳು ಬಂದಿರಬಹುದು. ಆದಕಾರಣ ಅಧ್ಯಕ್ಷ ಸ್ಥಾನವನ್ನು ವಾಪಸ್ ಪಡೆದಿರಬಹುದು. ಇದಕ್ಕೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಬಸವರಾಜ್ ದಡೇಸುಗೂರು ಹೇಳಿದ್ರು. ಇದನ್ನೂ ಓದಿ: ಹೈಕಮಾಂಡ್ ನಾಯಕರಿಗೆ ಶಾಕ್ ಕೊಟ್ಟ ಯಡಿಯೂರಪ್ಪ