ಬೆಂಗಳೂರು: ನಟ ರಾಘವೇಂದ್ರ ರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಘಣ್ಣ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಸಂಜೆ 6 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದು, ನಾಳೆ ಬೆಳಗ್ಗೆ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ. ಸದ್ಯ ರಾಘಣ್ಣನ ಜೊತೆ ನಟ ಪುನೀತ್ ಆಸ್ಪತ್ರೆಯಲ್ಲಿದ್ದಾರೆ.
Advertisement
Advertisement
ಇಂದು ಸಿನಿಮಾ ಶೂಟಿಂಗ್ ವೇಳೆ ಸುಸ್ತಾಗಿದ್ದ ರಾಘವೇಂದ್ರ ರಾಜ್‍ಕುಮಾರ್, ನಿನ್ನೆಯಷ್ಟೇ ಹೊಸ ಸಿನಿಮಾ ‘ಬೆಳಕು’ ವಿನ ಮುಹೂರ್ತ ಆಗಿತ್ತು. ಈ ಸಂಬಂಧ ಇಂದು ನಟ ಸುದ್ದಿಗೋಷ್ಟಿ ನಡೆಸಿದ್ದರು. ಅಲ್ಲದೆ ಮೊನ್ನೆಯಷ್ಟೇ ದಾವಣಗೆರೆಗೆ ತೆರಳಿದ್ದರು. ಪೊಗರು ಆಡಿಯೋ ಲಾಂಚ್ ನಲ್ಲಿ ಭಾಗಿಯಾಗಿದ್ದರು.