ಮುಂಬೈ: ಅತಿಥಿ ದೇವೋ ಭವ ಎಂಬ ಕಲ್ಪನೆಯೊಂದಿಗೆ ಚಾಯ್‍ವಾಲನೋರ್ವ ತನ್ನ ವಿಚಿತ್ರವಾದ ಸ್ಟೈಲ್ ನಲ್ಲಿ ಗ್ರಾಹಕರಿಗೆ ಚಹಾ ನೀಡುವ ಮೂಲಕ ಹೆಸರುವಾಸಿಯಾಗಿದ್ದಾನೆ.
Advertisement
ಮಹಾರಾಷ್ಟ್ರದ ನಾಗ್ಪುರ ಬಳಿ ಸಣ್ಣ ಅಂಗಡಿಯೊಂದರಲ್ಲಿ ಚಹಾ ಮಾರಾಟ ಮಾಡುತ್ತಿರುವ ಈತನ ಹೆಸರು ಡಾಲಿ. ಕಳೆದ 20 ವರ್ಷಗಳಿಂದ ಚಹಾ ಅಂಗಡಿ ಇಟ್ಟಿರುವ ಈತನ ಅಂಗಡಿ ಹೆಸರು ಡಾಲಿ ಕಿ ತಪ್ ರಿ ಎಂದೇ ಹೆಸರುವಾಸಿ. ಡಾಲಿ ತನ್ನ ವಿಚಿತ್ರವಾದ ಸ್ಟೈಲ್‍ನಿಂದ ಗ್ರಾಹಕರಿಗೆ ಚಹಾ ನೀಡಿ ಎಲ್ಲರ ಮನಗೆದ್ದಿದ್ದಾನೆ. ಇದರಿಂದಾಗಿಯೇ ಡಾಲಿ ಅಂಗಡಿಗೆ ದಿನನಿತ್ಯ ಚಹಾ ಸೇವಿಸಲು ಬರುವವರಿದ್ದಾರೆ. ಡಾಲಿ ಮೇಲಿನಿಂದ ಚಹಾ ಪಾತ್ರೆಗೆ ಹಾಲನ್ನು ಸುರಿಯುವ ರೀತಿ, ಗ್ರಾಹಕರಿಗೆ ಚಹಾ ಕೊಡುವ ಸ್ಟೈಲ್, ಮತ್ತು ಅವರಿಂದ ಹಣ ಪಡೆದುಕೊಂಡು ಚಿಲ್ಲರೆ ಕೊಡುವ ವಿಚಿತ್ರವಾದ ಮ್ಯಾನರೀಸಮ್‍ನಿಂದಾಗಿ ಎಲ್ಲರ ಅಚ್ಚುಮೆಚ್ಚಿನ ಚಾಯ್‍ವಾಲನಾಗಿ ಗುರುತಿಸಿಕೊಂಡಿದ್ದಾನೆ.
Advertisement
Advertisement
ಡಾಲಿ ತನ್ನ ವಿಚಿತ್ರವಾದ ಸ್ಟೈಲ್ ಮೂಲಕ ಗ್ರಾಹಕರನ್ನು ಸೆಳೆಯುವುದರೊಂದಿಗೆ, ಅದೇ ರೀತಿಯ ಆತಿಥ್ಯವನ್ನು ನೀಡಿ ಚಹಾ ಕೂಡ ವಿತರಿಸುತ್ತಾನೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ಸ್ಟೈಲಿಶ್ ಚಾಯ್‍ವಾಲ ಗ್ರಾಹಕರಿಗೆ ರಂಜಿಸುತ್ತಾ ಬಿಸಿ ಬಿಸಿಯಾದ ಚಹಾವನ್ನು ಗ್ಲಾಸ್‍ಗೆ ಸುರಿಯುವ ರೀತಿ ಮತ್ತು ಮೊದಲ ಬಾರಿಗೆ ಅಂಗಡಿಗೆ ಬರುವ ಗ್ರಾಹಕರಿಗೆ ಏಲಕ್ಕಿ ನೀಡಿ ಗೌರವಿಸುವಂತಹ ಪದ್ಧತಿಯನ್ನು ಬೆಳೆಸಿಕೊಂಡು ಕೇವಲ 7 ರೂಪಾಯಿಗಳಿಗೆ ಚಹಾ ನೀಡುವ ಮೂಲಕ ಸೇವೆ ಮಾಡುತ್ತಿದ್ದಾನೆ.
Advertisement
ಡಾಲಿ ಜೊತೆ ಈ ರೀತಿ ನೀವು ಸ್ಟೈಲಿಶ್ ಚಾಯ್‍ವಾಲನಾಗಲು ಪ್ರೇರಣೆ ಯಾರೆಂದು ಕೇಳಿದಾಗ ಆತ ದಕ್ಷಿಣ ಭಾರತ ಖ್ಯಾತ ಚಿತ್ರ ನಟ ರಜನಿಕಾಂತ್ ಎನ್ನುತ್ತಾನೆ. ಡಾಲಿ ರಜನಿಕಾಂತ್ ಅವರ ಅಭಿಮಾನಿಯಾಗಿದ್ದು, ಅವರ ಸಿನಿಮಾದ ಹೊಸ ಹೊಸ ಸ್ಟೈಲ್‍ಗಳನ್ನು ಮೆಚ್ಚಿ ಅವರಂತೆ ಉದ್ದ ಕೂದಲನ್ನು ಬಿಟ್ಟು ಚಾಯ್‍ವಾಲನಾಗಿ ಮಿಂಚುತ್ತಿದ್ದಾರೆ.
ಡಾಲಿ ಈ ರೀತಿ ಚಹಾ ಗ್ರಾಹಕರಿಗೆ ವಿತರಣೆ ಮಾಡುವ ರೀತಿಯನ್ನು ವೀಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತಂಡವೊಂದು ಹರಿಬಿಟ್ಟಿತು. ಇದನ್ನು ನೋಡಿದ ಜನರೆಲ್ಲ ಡಾಲಿಯ ಸರ್ವಿಂಗ್ ನೋಡಿ ಖುಷಿ ಪಡುತ್ತಿದ್ದಾರೆ.