-ಫೋಟೋ ಪೋಸ್ಟ್ ಮಾಡಿದ್ದ ನಟಿ
-ಸಲ್ಮಾನ್ ಬರ್ತ್ ಡೇ ಪಾರ್ಟಿಯಲ್ಲಿ ಕಿಸ್ಸಿಂಗ್
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಟಿಗೆ ಕಿಸ್ ಮಾಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 2016ರ ವೇಳೆ ನಟ ಸಲ್ಮಾನ್ ಖಾನ್ ಬರ್ತ್ ಡೇ ಪಾರ್ಟಿಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನ ನಟಿಯೇ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡು ಸುಶಾಂತ್ ತಲೆಹರಟೆಯನ್ನ ರಿವೀಲ್ ಮಾಡಿದ್ದರು. ಸದ್ಯ ಈ ಫೋಟೋಗಳು ವೈರಲ್ ಆಗಿವೆ.
Advertisement
ಎಂ.ಎಸ್.ಧೋನಿ ಸಿನಿಮಾದಲ್ಲಿ ಸುಶಾಂತ್ ಗೆ ಜೊತೆಯಾಗಿ ಕಿಯಾರಾ ಅದ್ವಾನಿ ನಟಿಸಿದ್ದರು. ಸಲ್ಮಾನ್ ಖಾನ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಬ್ಬರು ಭಾಗಿಯಾಗಿದ್ದ ವೇಳೆ ಸುಶಾಂತ್ ನಟಿಗೆ ಕಿಸ್ ಮಾಡಿದ್ದರು. ಅಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ಕಿಯಾರಾ, ನೀವು ಯಾವಾಗಲೂ ಸಿಕ್ಕಾಗಲೂ ಹೀಗೆ ಆಗೋದು ಎಂದು ಬರೆದು ಸುಶಾಂತ್ ಅಟ್ಯಾಕ್ ಹ್ಯಾಶ್ ಟ್ಯಾಗ್ ಬಳಸಿದ್ದರು. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ
Advertisement
https://www.instagram.com/p/BOg0M_0jExw/?utm_source=ig_embed
Advertisement
ಸುಶಾಂತ್ ನಿಧನವಾದಗಲೂ ಕಿಯಾರಾ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡು ಸಂತಾಪ ಸೂಚಿಸಿದ್ದರು. ಸುಶಾಂತ್ ನಿಧನದ ಬಳಿಕ ನಟನ ಹಳೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿವೆ. ಇದನ್ನೂ ಓದಿ: ಹೌದು, ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿದ್ದೆ: ರಿಯಾ ಚಕ್ರವರ್ತಿ
Advertisement
ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಗೆ ದೊಡ್ಡ ಬ್ರೇಕ್ ನೀಡಿತ್ತು. ಚಿತ್ರದಲ್ಲಿ ನಟಿಸಿದ ಕಿಯಾರಾ ಅದ್ವಾನಿ ಮತ್ತು ದಿಶಾ ಪಟಾಣಿಗೂ ಹೆಸರು ತಂದುಕೊಟ್ಟಿತ್ತು. 2016ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾ 200ಕ್ಕೂ ಅಧಿಕ ಕೋಟಿ ಹಣವನ್ನ ತನ್ನ ಜೇಬಿಗೆ ಇಳಿಸಿಕೊಂಡಿತ್ತು. ಇದನ್ನೂ ಓದಿ: ಸರ್ ನಿಧನದ ಬಳಿಕ ಮನೆಯಲ್ಲಿದ್ದ ಡ್ರಗ್ ಸಿಗರೇಟ್ ರೋಲ್ ಮಾಯವಾಯ್ತು: ಸುಶಾಂತ್ ಮನೆಯ ಕುಕ್
ಜೂನ್ 14ರಂದು ಸುಶಾಂತ್ ಮೃತದೇಹ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಆತ್ಮಹತ್ಯೆ ಎಂದು ಹೇಳಲಾಗಿದ್ರೂ ಅಭಿಮಾನಿಗಳು ನಟನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಸುಶಾಂತ್ ನಿಧನ ಬಾಲಿವುಡ್ ನಲ್ಲಿರುವ ಸ್ವಜನಪಕ್ಷಪಾತದಿಂದ ಆಗಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ನಟಿ ಕಂಗನಾ ರಣಾವತ್ ಆಗ್ರಹಿಸಿದ್ದರು. ಸುಶಾಂತ್ ನಿಧನದ ಒಂದು ತಿಂಗಳ ಬಳಿ ಕಂಗನಾಗೆ ನಟಿ ಅಂಕಿತಾ ಲೋಖಂಡೆ ಸಾಥ್ ನೀಡಿ, ಮಾಜಿ ಪ್ರಿಯಕರನ ಸಾವಿನ ರಹಸ್ಯ ಬಹಿರಂಗವಾಗಬೇಕೆಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ
ಕಳೆದ ಮೂರು ತಿಂಗಳಲ್ಲಿ ಹಲವು ಮಜಲುಗಳಲ್ಲಿ ಸಾಗಿದ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನ ಸಿಬಿಐ ನಡೆಸುತ್ತಿದೆ. ಸಿಬಿಐ ತನಿಖೆ ವೇಳೆ ಡ್ರಗ್ಸ್ ದಂಧೆಯ ಸುಳಿವು ಲಭ್ಯವಾಗಿದ್ದರಿಂದ ಎನ್‍ಸಿಬಿ ಸಹ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಎನ್‍ಸಿಬಿ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರನ್ನ ಬಂಧಿಸಿದೆ. ಇತ್ತ ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಗೂ ಎನ್‍ಸಿಬಿ ಸಮನ್ಸ್ ನೀಡಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಪ್ರಕರಣಕ್ಕೆ ಹೊಸ ತಿರುವು ನೀಡಿದ ಸುಶಾಂತ್ ಪಕ್ಕದ್ಮನೆ ಮಹಿಳೆ ಹೇಳಿಕೆ