ಚಿಕ್ಕಬಳ್ಳಾಪುರ: ಕೊರೊನಾ ಆತಂಕದಿಂದ ವಿಶ್ವವಿಖ್ಯಾತ ನಂದಿಗಿರಿಧಾಮವನ್ನು ವೀಕೆಂಡ್ ಲಾಕ್ಡೌನ್ ಮಾಡಲಾಗಿದ್ದು, ಪ್ರವಾಸಿಗರನ್ನು ನಿರ್ಬಂಧಿಸಲು ನಂದಿಬೆಟ್ಟಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
Advertisement
ವೀಕೆಂಡ್ನಲ್ಲಿ ನಂದಿಬೆಟ್ಟ ಬಂದ್ ಇದ್ದರೂ ಕಳೆದ ವಾರ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸಿ, ನಂದಿಬೆಟ್ಟದ ತಪ್ಪಲಿನ ಚೆಕ್ ಪೋಸ್ಟ್ ಬಳಿ ಜಮಾಯಿಸಿದ್ದರು. ಇದರಿಂದ ಟ್ರಾಫಿಕ್ ಜಾಮ್, ಸಾವಿರಾರು ಜನ ಸೇರಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದರು. ಇನ್ನೂ ರಾಜಾರೋಷವಾಗಿ ಹುಕ್ಕಾ ಸೇದಿ ಕೆಲ ಯುವಕರು ಮೋಜು ಮಸ್ತಿ ಮಾಡಿದ್ದಾರೆ.
Advertisement
Advertisement
ಹಲವರು ಅಕ್ಕ ಪಕ್ಕದ ಬೆಟ್ಟಗಳನ್ನು ಏರಿ ಫೋಟೋ, ಸೆಲ್ಫಿಗೆ ಮುಗಿಬಿದ್ದಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಬಿತ್ತರ ಮಾಡಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಈ ವೀಕೆಂಡ್ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರ ತಡೆಗೆ ಮೂರು ಕಡೆ ಚೆಕ್ ಪೋಸ್ಟ್ ಆರಂಭಿಸಿದೆ. ದೇವನಹಳ್ಳಿ ಬಳಿಯ ರಾಣಿ ಕ್ರಾಸ್ ಸರ್ಕಲ್ ಹಾಗೂ ಕಾರಹಳ್ಳಿ ಕ್ರಾಸ್ ಸೇರಿದಂತೆ ನಂದಿಬೆಟ್ಟದ ಕ್ರಾಸ್ ನಲ್ಲಿ ಬ್ಯಾರಿಕೇಡ್ ಹಾಕಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ:ನಾನು ಹಠವಾದಿ, ಅಂದುಕೊಂಡಿದ್ದನ್ನ ಸಾಧಿಸದೇ ಬಿಡಲ್ಲ: ಸಚಿವ ಆನಂದ್ ಸಿಂಗ್
Advertisement