ಚೆನ್ನೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಗೆಲ್ಲುವುದರ ಮೂಲಕ ನಾಯಕನಾಗಿ ವಿರಾಟ್ ಕೊಹ್ಲಿ ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
Advertisement
ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಸೋತ ಭಾರತ ಎರಡನೇ ಟಸ್ಟ್ ಪಂದ್ಯದಲ್ಲಿ ಅದೇ ಅಂಗಳದಲ್ಲಿ ಇಂಗ್ಲೆಂಡ್ಗೆ ತಿರುಗೇಟು ನೀಡಿ ಭರ್ಜರಿಯಾಗಿ 317 ರನ್ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ನಾಯಕನಾಗಿ ತವರಿನಲ್ಲಿ 28 ಟೆಸ್ಟ್ ಪಂದ್ಯಾಟವನ್ನು ಮುನ್ನಡೆಸಿ 21 ಗೆಲುವಿನೊಂದಿಗೆ ಭಾರತ ತಂಡದ ಮಾಜಿ ನಾಯಕ ಧೋನಿ ಅವರ 30 ಟೆಸ್ಟ್ ಪಂದ್ಯದಲ್ಲಿ 21 ಗೆಲುವಿನ ದಾಖಲೆಯನ್ನು ಸರಿಗಟ್ಟಿದ್ದಾರೆ.
Advertisement
Advertisement
ತವರಿನಲ್ಲಿ ವಿರಾಟ್ ಕೊಹ್ಲಿ ಒಟ್ಟು 28 ಪಂದ್ಯದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ 21 ಜಯ, 2 ಸೋಲು, 5 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಧೋನಿ ತವರಿನಲ್ಲಿ 30 ಪಂದ್ಯದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ 21 ಜಯ, 3 ಸೋಲು, 6 ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ. ಈ ಮೂಲಕ ಕೊಹ್ಲಿಗೆ ಧೋನಿ ದಾಖಲೆಯನ್ನು ಮುರಿಯಲು ಒಂದು ಹೆಚ್ಚೆ ಮಾತ್ರ ಬಾಕಿ ಇದೆ.
Advertisement
ನಾಯಕನಾಗಿ ವಿರಾಟ್ ಕೊಹ್ಲಿ ಒಟ್ಟು 58 ಟೆಸ್ಟ್ ಪಂದ್ಯಾಟಗಳನ್ನು ಮುನ್ನಡೆದ್ದು 34 ಜಯ, 14 ಸೋಲು ಮತ್ತು 10 ಪಂದ್ಯವನ್ನು ಡ್ರಾ ಮಾಡಿಕೊಂಡರೆ ಧೋನಿ 60 ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿ 27 ಜಯ, 18 ಸೋಲು ಮತ್ತು 15 ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ.
ಧೋನಿ ದಾಖಲೆಯನ್ನು ಸರಿಗಟ್ಟಿರುವ ಕೊಹ್ಲಿಗೆ ಇನ್ನು ಒಂದು ಗೆಲುವು ದೊರೆತರೆ ನಾಯಕನಾಗಿ ತವರಿನಲ್ಲಿ ಅತೀ ಹೆಚ್ಚು ಗೆಲುವು ಕಂಡ ಕ್ಯಾಪ್ಟನ್ ಆಗಿ ಕಿಂಗ್ ಕೊಹ್ಲಿ ಹೊರಹೊಮ್ಮಲಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಾಟವು ಫೆಬ್ರವರಿ 24 ರಿಂದ ಅಹಮಾದಾಬಾದ್ನ ಮೊಟೆರಾ ಕ್ರೀಡಾಂಗಣ ನಡೆಯಲಿದೆ.