Connect with us

Corona

ಧಾರವಾಡ ಉಪನಗರ ಠಾಣೆಯ ಮತ್ತೊಬ್ಬ ಪೇದೆಗೆ ಕೊರೊನಾ

Published

on

ಧಾರವಾಡ: ನಗರದ ಪೊಲೀಸ್ ಠಾಣೆಗಳಿಗೆ ಕೊರೊನಾ ಸೋಂಕು ಬೆಂಬಿಡದೆ ಕಾಡುತ್ತಿದ್ದು, ಕಳೆದ 15 ದಿನಗಳಲ್ಲಿ ಮೂರು ಪೊಲೀಸ್ ಠಾಣೆಗಳಲ್ಲಿನ ಪೇದಗಳಿಗೆ ಸೋಂಕು ತಗುಲಿದೆ.

ಇಗಾಗಲೇ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮೂವರಿಗೆ ಕೊರೊನಾ ಸೋಂಕು ತಗುಲಿತ್ತು. ಇದಾದ ಬಳಿಕ ಶಹರ ಪೊಲೀಸ್ ಠಾಣೆಯಲ್ಲಿಯ ನಾಲ್ವರಿಗೆ ಸೋಂಕು ತಗುಲಿತು. ಈಗ ಉಪನಗರ ಪೊಲೀಸ್ ಠಾಣೆಯಲ್ಲಿ ಸಹ ಕೊರೊನಾ ತಗುಲಿದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆ ಉಪನಗರ ಪೊಲೀಸ್ ಠಾಣೆಯನ್ನು ಸಹ ಸೀಲ್‍ಡೌನ್ ಮಾಡಲಾಗಿದೆ.

ಇದೀಗ ಪೊಲೀಸ್ ಸಿಬ್ಬಂದಿ ಠಾಣೆಯ ಹೊರೆಗೆ ಕೆಲಸ ಮಾಡುವಂತಾಗಿದೆ. ಉಪನಗರ ಠಾಣೆಯ 40 ವರ್ಷದ ಪೊಲೀಸ್ ಪೇದೆಗೆ ಸೋಂಕು ತಗುಲಿದ್ದರಿಂದ ಠಾಣೆ ಸಿಲ್‍ಡೌನ್ ಮಾಡಲಾಗಿದೆ. ಇಗಾಗಲೇ ಹುಬ್ಬಳ್ಳಿಯ ಹಲವು ಠಾಣೆಯ ಸಿಬ್ಬಂದಿಗೆ ಕೊರೊನಾ ಒಕ್ಕರಿಸಿದೆ. ಆ ಠಾಣೆಗಳನ್ನು ಸಹ ಸೀಲ್‍ಡೌನ್ ಮಾಡಲಾಗಿದೆ.

Click to comment

Leave a Reply

Your email address will not be published. Required fields are marked *