ಬೆಂಗಳೂರು: ಸ್ಯಾಂಡಲ್ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ದ್ವಿತ್ವ ಸಿನಿಮಾಕ್ಕೆ ನಾಯಕಿಯಾಗಿ ಪರಭಾಷಾ ನಟಿ ತ್ರಿಷಾ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಹೊಂಬಾಳೆ ಫಿಲಂಸ್ ಬ್ಯಾನರಿ ನಿರ್ಮಾಣವಾಗುತ್ತಿರುವ ದ್ವಿತ್ವ ಸಿನಿಮಾಗೆ ತ್ರಿಷಾ ಕೃಷ್ಣ ಸೇರಲಿದ್ದಾರೆ. ಪ್ರತಿಭಾವಂತ ನಟಿ ತ್ರಿಷಾ ಅವರನ್ನು ನಾವು ಸ್ವಾಗತಿಸುತ್ತೇವೆ ಎಂದು ಬರೆದುಕೊಂಡು ಚಿತ್ರತಂಡ ಟ್ವೀಟ್ ಮಾಡಿದೆ.
- Advertisement 2-
The leading lady of #Dvitva is here.
We welcome the talented @trishtrashers on board.@PuneethRajkumar @VKiragandur @hombalefilms@Pawanfilms @HombaleGroup @DvitvaMovie pic.twitter.com/Nj3wXw8A3f
— Vijay Kiragandur (@VKiragandur) August 2, 2021
- Advertisement 3-
2014ರಲ್ಲಿ ತೆರೆಗೆ ಬಂದ ಪುನೀತ್ ನಟನೆಯ ಪವರ್ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಹಾಗೂ ಕೊನೆಯ ಕನ್ನಡ ಚಿತ್ರವಾಗಿತ್ತು. ಈ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇದಾದ ನಂತರದಲ್ಲಿ ಅವರು ಯಾವುದೇ ಕನ್ನಡ ಚಿತ್ರಗಳಲ್ಲಿ ನಟಿಸಿಲ್ಲ. ಪವರ್ ತೆರೆಕಂಡ ನಂತರದಲ್ಲಿ ತ್ರಿಷಾಗೆ ಬೇರೆ ಭಾಷೆಗಳಲ್ಲಿ ಒಳ್ಳೆಯ ಆಫರ್ ಬರೋಕೆ ಶುರುವಾದವು. ಹೀಗಾಗಿ, ಅವರು ಪರ ಭಾಷೆಯಲ್ಲಿ ಬ್ಯುಸಿಯಾದರು. ಈಗ ಅವರು ಮತ್ತೆ ಕನ್ನಡಕ್ಕೆ ಮರಳುತ್ತಿದ್ದಾರೆ.
- Advertisement 4-
The leading lady of #Dvitva is here.
We welcome the talented @trishtrashers on board.@PuneethRajkumar @VKiragandur @hombalefilms@Pawanfilms @HombaleGroup @DvitvaMovie pic.twitter.com/waNkU7FY92
— Hombale Films (@hombalefilms) August 2, 2021
ಸೈಕಲಾಜಿಕಲ್ ಕಥಾಹಂದರ ಹೊಂದಿದ್ದ ಲೂಸಿಯಾ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಪವನ್ ಕುಮಾರ್ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅವರು ದ್ವಿತ್ವ ಸಿನಿಮಾದಲ್ಲಿ ಮತ್ತೆ ಸೈಕಲಾಜಿಕಲ್ ಕಥೆಯನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಶೀರ್ಷಿಕೆ ಜೊತೆಗೆ ಡಿಫರೆಂಟ್ ಆದಂತಹ ಪೋಸ್ಟರ್ ಕೂಡ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಈಗ ಈ ಚಿತ್ರಕ್ಕೆ ತ್ರಿಷಾ ಕೃಷ್ಣನ್ ನಾಯಕಿಯಾಗಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.