Bengaluru CityCinemaDistrictsKarnatakaLatestMain Post

ದೊಡ್ಮನೆಯ ಉಪಮುಖ್ಯಮಂತ್ರಿಯಾದ ಅರವಿಂದ್

Advertisements

ರಾಜಕೀಯದಲ್ಲಿ ಖಾತೆ ಹಂಚಿಕೆ ಸರ್ವೇಸಾಮಾನ್ಯವಾಗಿ ನಡೆಯುತ್ತದೆ. ಆದ್ರೆ ಬಿಗ್‍ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್‍ರವರು ಮನೆಯ ಸ್ಪರ್ಧಿಗಳಿಗೆ ಯಾವ ಖಾತೆ ಸೂಟ್ ಆಗುತ್ತದೆ ಎಂದು ತಿಳಿಸಿದ್ದಾರೆ.

ಕಣ್ಮಣಿ ಬಿಗ್‍ಬಾಸ್ ಸಂಪುಟದಲ್ಲಿ ಯಾವ ಖಾತೆ ಯಾರಿಗೆ ಕೊಡಬಹುದು ಎಂದು ಚಕ್ರವರ್ತಿಯವರಿಗೆ ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಪ್ರಿಯಾಂಕರಿಂದ ಶುರು ಮಾಡಿದ ಚಕ್ರವರ್ತಿಯವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರಿಗೆ ನೀಡುತ್ತೇನೆ ಏಕೆಂದರೆ ಅವರು ತುಂಬಾ ಸಂಸ್ಕøತಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ವಸತಿ ಮತ್ತು ಆಹಾರ ಇಲಾಖೆಯನ್ನು ಶುಭಾಗೆ ನೀಡುತ್ತೇನೆ ಕಾರಣ ಇವರು ವಸತಿ ಕಡೆಗೂ ಜಾಸ್ತಿ ಹೋಗುವುದಿಲ್ಲ ಹಾಗೂ ಆಹಾರದ ಕಡೆಗೂ ಜಾಸ್ತಿ ಹೋಗುವುದಿಲ್ಲ. ರಾಜ್ಯ ಸರ್ಕಾರದಲ್ಲಿ ಅದು ಅತೀ ದೊಡ್ಡ ಖಾತೆಯಾಗಿರುವುದರಿಂದ ಅದು ಅವರಿಗಿರಲಿ ಎಂದು ಬಯಸುತ್ತೇನೆ.

ಧರ್ಮದತ್ತಿ ಅಂದರೆ ಧಾರ್ಮಿಕ ಇಲಾಖೆಯನ್ನೇ ವೈಷ್ಣವಿಗೆ ನೀಡುತ್ತೇನೆ. ಜೀವನ ಶೂನ್ಯ, ದೇವಸ್ಥಾನ ಮುಜರಾಯಿ ಇಲಾಖೆಯನ್ನು ನೀಡಬೇಕಾಗುತ್ತದೆ. ಕಂದಾಯ ಇಲಾಖೆಯನ್ನು ನಿಧಿಗೆ ನೀಡುತ್ತೇನೆ. ಅವರ ಮೈಂಡ್ ಯಾವಾಗಲೂ ರೆವೆನ್ಯೂ, ಲೆಕ್ಕಾಚಾರನ್ನೇಲ್ಲಾ ಬಹಳ ಚೆನ್ನಾಗಿ ಮಾಡುತ್ತಾರೆ. ಇನ್ನೂ ಶಮಂತ್‍ಗೆ ಖಾತೆ ಕೊಡದೇ ಸದ್ಯಕ್ಕೆ ಬೀಜ ನಿಗಮ ನಿಯಮಿತ ನೀಡುತ್ತೇನೆ. ಇವನು ಕೃಷಿ, ಬೀಜ ಹೇಗೆ ಹಾಕಬೇಕು, ಹೇಗೆ ಬೆಳೆಸಬೇಕು ಏನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುತ್ತಾರೆ.

ರಘುಗೆ ಶೇ. 100 ಅಬಕಾರಿಯನ್ನು ನೀಡುತ್ತೇನೆ. ಬೇರೆ ಚೇಂಜ್ ಮಾಡುವುದಕ್ಕೆ ಹೋಗುವುದಿಲ್ಲ. ಅವರ ಮಾತು, ನಡೆ, ನುಡಿ ಕಣ್ಣೋಟ ಇಲ್ಲದರಲ್ಲಿಯೂ ನಶೆ ತುಂಬಿರುತ್ತದೆ. ಮಂಜುಗೆ ಮನೆಯನ್ನೆಲ್ಲಾ ಸಂಬಾಳಿಸಿ ಯಾವುದಾದರೂ ತಪ್ಪು ನಡೆದರೂ ಸರಿ ಮಾಡಿಕೊಂಡು, ವಾಕಿಂಗ್ ಸ್ಟಿಕ್‍ನಲ್ಲಿ ಏನು ಮಾಡಬೇಕು, ಹಾಲ್‍ನಲ್ಲಿ ಏನು ಮಾಡಬೇಕು, ಎಲ್ಲಿ ಏನು ಮಾಡಬೇಕು ಎಂಬುವುದನ್ನೆಲ್ಲಾ ಬಹಳ ಚೆನ್ನಾಗಿ ನಿಭಾಯಿಸುತ್ತಾರೆ ಹೀಗಾಗಿ ಅವರಿಗೆ ಗೃಹ ಇಲಾಖೆ ಖಾತೆ ನೀಡುತ್ತೇನೆ.

ದಿವ್ಯಾ ಸುರೇಶ್‍ರವರಿಗೆ ಪ್ರವಾಸೋದ್ಯಮ ನೀಡುತ್ತೇನೆ. ಅವರದ್ದು ಪೂರ್ತಿ ಪ್ರವಾಸವಿರುತ್ತದೆ. ಹುಡುಕಿದರೂ ಕಾಣುವುದಿಲ್ಲ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಚಿಗರಿ ಮರಿ ತರ ನಡೆಯುತ್ತಿರುತ್ತದೆ. ನಮ್ಮ ಪ್ರಶಾಂತ್‍ಗೆ ಕಾನೂನು ಮತ್ತು ಸಂಸದೀಯ ಮಂಡಳಿ. ಬೇರೆ ಖಾತೆಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅವರಿಗೆ ಕಾನೂನು ಹಾಗೂ ಸಂಸದೀಯ ಮಂಡಳಿ. ಅರವಿಂದ್ ಕೆಪಿಗೆ ಐದರೂ ಖಾತೆ ನೀಡಿ ಉಪಮುಖ್ಯಮಂತ್ರಿ ಮಾಡುತ್ತೇನೆ. ಯಾವಾಗ ಯಾವ ಖಾತೆಗೆ ಬೇಕಾದರೂ ಜಂಪ್ ಆಗಬಹುದು.

ಕೊನೆಯದಾಗಿ ನನಗೆ ಮಹಿಳಾ ಮತ್ತು ಮಕ್ಕಳಾ ಇಲಾಖೆಯನ್ನು ಕೊಟ್ಟುಕೊಳ್ಳುತ್ತೇನೆ. ನಾನು ಅದರಲ್ಲಿ ಬಹಳ ಎಕ್ಸ್‍ಪರ್ಟ್ ಆಗಿದ್ದೇನೆ. ಮುಖ್ಯಮಂತ್ರಿ ಸ್ಥಾನವನ್ನು ಬಿಗ್‍ಬಾಸ್‍ಗೆ ಬಿಟ್ಟಿದ್ದೇನೆ. ಅವರೊಟ್ಟಿಗೆ ನನಗೆ ಫೈಟ್ ಮಾಡಲು ಆಗುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Back to top button