ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಗುಣನುಖ ಪ್ರಮಾಣ ಶೇ.96.16ಕ್ಕೇರಿದೆ. ದೇಶದಲ್ಲಿ ಸದ್ಯ 7,60,019 ಸಕ್ರಿಯ ಪ್ರಕರಣಗಳು, ಇದು ಕಳೆದ 74 ದಿನಗಳಲ್ಲಿ ಅತಿ ಕಡಿಮೆಯಾಗಿದೆ.
ಕಳೆದ 24 ಗಂಟೆಯಲ್ಲಿ 60,753 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 97,743 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 24 ಗಂಟೆಯಲ್ಲಿ 1,647 ಜನರು ಕೊರೊನಾಗೆ ಬಲಿಯಾಗಿದ್ದು, ಇದುವರೆಗೂ 3,85,137 ಜನರು ಸಾವನ್ನಪ್ಪಿದ್ದಾರೆ. ಇತ್ತ ಕೊರೊನಾ ಲಸಿಕಾಕರಣ ವೇಗ ಪಡೆದುಕೊಂಡಿದ್ದು, ಇದುವರೆಗೂ 27,23,88,783 ಡೋಸ್ ನೀಡಲಾಗಿದೆ.
Advertisement
Advertisement
ಒಂದು ವಾರದಿಂದ ದೇಶದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆ ದಾಖಲಾಗಿದೆ. ಸದ್ಯ 3.58ರಷ್ಟು ಪಾಸಿಟಿವಿಟಿ ರೇಟ್ ಇದೆ. ಪ್ರಕರಣಗಳ ಸಂಖ್ಯೆ ಇಳಿಮುಖವಾದ್ರೂ ಟೆಸ್ಟಿಂಗ್ ಹೆಚ್ಚಿಸಲಾಗಿದೆ.
Advertisement