– 78,003ಕ್ಕೆ ಏರಿದ ಸೋಂಕಿತರ ಸಂಖ್ಯೆ
– ಈವರೆಗೂ 2,545 ಮಂದಿಯನ್ನು ಬಲಿ ಪಡೆದ ಕೊರೊನಾ
ನವದೆಹಲಿ: ದಿನೇ ದಿನೇ ಭಾರತದಲ್ಲಿ ಕೊರೊನಾ ರೌದ್ರನರ್ತನ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 134 ಮಂದಿ ಬಲಿಯಾಗಿದ್ದಾರೆ. 3,722 ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 78,003ಕ್ಕೆ ಏರಿದೆ.
Spike of 3722 #COVID19 cases & 134 deaths in the last 24 hours. Total positive cases in the country is now at 78003, including 49219 active cases, 26235 cured/discharged/migrated cases and 2549 deaths: Ministry of Health & Family Welfare pic.twitter.com/I5gHX0iXEC
— ANI (@ANI) May 14, 2020
Advertisement
ಈವರೆಗೆ ಮಹಾಮಾರಿ ಕೊರೊನಾ 2,545 ಮಂದಿಯನ್ನು ಬಲಿ ಪಡೆದಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಕಿಲ್ಲರ್ ಕೊರೊನಾ ಈವರೆಗೆ ಮಹಾರಾಷ್ಟ್ರದಲ್ಲಿ 975 ಮಂದಿಯನ್ನು ಬಲಿಪಡೆದಿದ್ದು, ಒಟ್ಟು 25,922 ಮಂದಿಗೆ ಈವರೆಗೆ ಸೋಂಕು ತಗುಲಿದೆ. 5,547 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
Advertisement
Advertisement
ಗುಜರಾತ್ನಲ್ಲಿ 9,268 ಮಂದಿ ಸೋಂಕಿಗೆ ತುತ್ತಾಗಿದ್ದು, 566 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 9,227 ಮಂದಿಗೆ ಕೊರೊನಾ ತಗುಲಿದ್ದು, 64 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 7,998 ಮಂದಿ ಕೊರೊನಾಗೆ ತುತ್ತಾಗಿದ್ದು, 106 ಮಂದಿ ಮೃತಪಟ್ಟಿದ್ದಾರೆ. ಸುಮಾರು 2,858 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ.
Advertisement
ಆಂಧ್ರಪ್ರದೇಶದಲ್ಲಿ 2,137 ಮಂದಿಗೆ ಸೋಂಕು ತಗುಲಿದ್ದು, 47 ಮಂದಿ ಸಾವನ್ನಪ್ಪಿದ್ದಾರೆ. 1,142 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ತೆಲಂಗಾಣದಲ್ಲಿ 1,367 ಮಂದಿ ಕೊರೊನಾ ತುತ್ತಾಗಿದ್ದು, 34 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ. ಕೇರಳದಲ್ಲಿ 535 ಮಂದಿಯಲ್ಲಿ ಈವರೆಗೆ ಸೋಂಕು ಕಾಣಿಸಿಕೊಂಡಿದ್ದು, 4 ಸೋಂಕಿತರು ಮೃತಪಟ್ಟಿದ್ದಾರೆ. 490 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ.
ಕರ್ನಾಟಕದಲ್ಲಿ ಈವರೆಗೆ 964 ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 33ಕ್ಕೆ ಏರಿದೆ. ಒಟ್ಟು 451 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಸೇರಿದ್ದಾರೆ. ಪಾದರಾಯಪುರದಲ್ಲಿ ಕ್ವಾರಂಟೈನಲ್ಲಿದ್ದ 5 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ 959 ಇದ್ದ ಸೋಂಕಿತರ ಸಂಖ್ಯೆ 964ಕ್ಕೆ ತಲುಪಿದೆ.