– ಸೋಂಕು ಸಮುದಾಯಕ್ಕೆ ಹರಡಿಲ್ಲ
ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿಲ್ಲ. ದೇಶದ ಜನಸಂಖ್ಯೆಗೆ ಹೋಲಿಸಿಕೊಂಡರೇ ಶೇ.1 ಪ್ರಮಾಣದಲ್ಲಿ ಸೋಂಕು ಹರಡಿದೆ. ಇದನ್ನು ಸಮುದಾಯ ಹರಡುವಿಕೆ ಎಂದು ಕರೆಯಲು ಸಾಧ್ಯವಿಲ್ಲ ಎಂದು ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ್ ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಕೆಲವು ಕಂಟೈನ್ಮೆಂಟ್ ಝೋನ್ ಗಳಿರುವ ನಗರಗಳಲ್ಲಿ ಮಾತ್ರ ಸೋಂಕು ಹರಡುತ್ತಿದೆ. ಅದನ್ನು ತಡೆಯುವ ಕೆಲಸ ನಡೆದಿದ್ದು, ಇದರ ಜೊತೆಗೆ ಟೆಸ್ಟಿಂಗ್ ಹೆಚ್ಚಿಸಲಾಗಿದೆ. ಲಾಕ್ಡೌನ್ನಿಂದ ಭಾರತದಲ್ಲಿ ಕೊರೊನಾ ಬೆಳವಣಿಗೆ ವೇಗಕ್ಕೆ ತಡೆ ಹಾಕಿದ್ದು ಬಹುತೇಕ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು.
Advertisement
India is such a large country and prevalence is very low. India is not in community transmission: Prof (Dr.) Balram Bhargava, DG, ICMR, Delhi on COVID19 pic.twitter.com/oFHfZL2cD9
— ANI (@ANI) June 11, 2020
Advertisement
ಕೊರೊನಾ ಸೋಂಕು ತಡೆಯಲು ಸಾಮಾಜಿಕ ಅಂತರದ ನಿಯಮಗಳ ಪಾಲನೆ ಕಡ್ಡಾಯ. ಕಂಟೈನ್ಮೆಂಟ್ಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಸೋಂಕು ಪತ್ತೆ ಹಚ್ಚಲು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಐಸಿಎಂಆರ್ ಪ್ರತಿ ದಿನಕ್ಕೆ ಎರಡು ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿ ಹೊಂದಿದೆ ಎಂದು ಮಾಹಿತಿ ನೀಡಿದರು.
Advertisement
???? #CoronaVirusUpdates:
???? India is among the lowest in the world recording only 20.77 COVID-19 cases per lakh population, as compared to 91.67 global average.
▶️ #COVID19 Cases per Lakh population????#IndiaFightsCorona #StayHomeStaySafe
Via @MoHFW_INDIA @WHO @ICMRDELHI pic.twitter.com/qw3d2vVXQ5
— #IndiaFightsCorona (@COVIDNewsByMIB) June 11, 2020
Advertisement
ಬಳಿಕ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಯಲದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, ವಿಶ್ವದ ಇತರೇ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರತಿ ಲಕ್ಷದಲ್ಲಿ ಒಬ್ಬರಿಗೆ ಸೋಂಕು ಹರಡಿದೆ. ಗುಣಮುಖವಾಗುತ್ತಿರುವವರ ಪ್ರಮಾಣ ಶೇ.49.21ಕ್ಕೆ ಏರಿಕೆಯಾಗಿದೆ ಎಂದರು.
Country-wide death report compiled based on States' data. If states take a day or two more in conducting 'death audit' &a change in numbers arises due to it, then, in next 2-3 days numbers are accounted for: Health Ministry on difference in COVID19 death toll by Delhi Govt & MCD pic.twitter.com/tC20u6AeNt
— ANI (@ANI) June 11, 2020
ಕೊರೊನಾ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಹಿನ್ನೆಲೆ ರೋಗಿಗಳಲ್ಲಿ ಅನುಮಾನ ಮೂಡದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಗಳು ಕಡ್ಡಾಯವಾಗಿ ಬೆಡ್ಗಳ ಮಾಹಿತಿಯನ್ನು ಪ್ರದರ್ಶಿಸಬೇಕು. ಆನ್ಲೈನ್ನಲ್ಲಿ ಬೆಡ್ಗಳ ಮಾಹಿತಿ ಹಂಚಿಕೊಳ್ಳಲು ಸೂಚಿಸಲಾಗಿದೆ. ಈವರೆಗೂ ಯಾವ ರಾಜ್ಯಗಳಲ್ಲೂ ಬೆಡ್ಗಳ ಕೊರತೆ ಸೃಷ್ಟಿಯಾಗಿಲ್ಲ. ಸೋಂಕಿಗೆ ಅನುಗುಣವಾಗಿ ಬೆಡ್ಗಳನ್ನು ಹೆಚ್ಚಿಸಲಾಗುತ್ತಿದೆ. ರೈಲ್ವೇ ಕೊಚ್ಗಳನ್ನು ಬೆಡ್ಗಳಾಗಿ ಮಾರ್ಪಡಿಸಿದೆ ರಾಜ್ಯ ಸರ್ಕಾರಗಳು ಅವಶ್ಯಕತೆ ಅನುಗುಣವಾಗಿ ಬಳಸಿಕೊಳ್ಳಬಹುದು ಎಂದರು.
We found that about 0.73% of the population in these 15 districts showed a prevalence of past exposure to infection. It means that lockdown measures were successful in keeping it low and preventing rapid spread: Prof (Dr.) Balram Bhargava, DG, ICMR, Delhi on serosurvey pic.twitter.com/cRu2ZCEReO
— ANI (@ANI) June 11, 2020