ನವದೆಹಲಿ: ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 37.148 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 11,55,191ಕ್ಕೇರಿದೆ.
ಬರೋಬ್ಬರಿ 587 ಮಂದಿ ಕೊರೊನಾ ಸೋಂಕಿಗೆ ಬಲಿ ಆಗಿದ್ದು, ಒಟ್ಟು ಮೃತರ ಸಂಖ್ಯೆ 28,084ಕ್ಕೇರಿದೆ. 4,02,529 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದು, 7,24,578 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ದಿಸ್ಚಾರ್ಜ್ ಆಗಿದ್ದಾರೆ.
Advertisement
Spike of 37,148 cases and 587 deaths reported in India in the last 24 hours.
Total #COVID19 positive cases stand at 11,55,191 including 4,02,529 active cases, 7,24,578 cured/discharged/migrated and 28084 deaths: Ministry of Health and Family Welfare pic.twitter.com/iuKN63EYtV
— ANI (@ANI) July 21, 2020
Advertisement
ಕಳೆದ ಒಂದು ವಾರದಿಂದ ದೇಶದಲ್ಲಿ ಎರಡೂವರೆ ಲಕ್ಷ ಪಾಸಿಟಿವ್ ಪ್ರಕರಣ ನಮೂದಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷ ದಾಟಿದೆ. ಸೋಂಕು ಪ್ರಕರಣಗಳು ದ್ವಿಗುಣಗೊಳ್ಳುವ ಅವಧಿ 17 ದಿನದಿಂದ 21ಕ್ಕೆ ಜಂಪ್ ಆಗಿದೆ. ಕೊರೊನಾ ಮರಣಗಳ ಪ್ರಮಾಣ ಮೊದಲ ಬಾರಿಗೆ ಶೇಕಡಾ 2.49ಕ್ಕೆ ಇಳಿದಿದೆ. ಜುಲೈ 20 ವೇಳೆಗೆ ದೇಶದಲ್ಲಿ 1,43,81,303 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ನಿನ್ನೆ 3,3,395 ಮಾದರಿಗಳ ಪರೀಕ್ಷೆ ನಡೆದಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
Advertisement
1,43,81,303 samples tested for #COVID19 up to 20th July. Of these 3,33,395 were tested yesterday: Indian Council of Medical Research (ICMR) pic.twitter.com/8PZaQrdzGt
— ANI (@ANI) July 21, 2020