ಶಿವಮೊಗ್ಗ: ರೈತರ ಪರವಾಗಿ ಹೋರಾಟ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ರೈತರ ಪರವಾಗಿ ಅಷ್ಟೇ ಕಾಳಜಿ ಹೊಂದಿರುವ ಬಿ.ಎಸ್.ಯಡಿಯೂರಪ್ಪ ರಾಜ್ಯದ ಈ ಇಬ್ಬರು ನಾಯಕರನ್ನು ನಾನು ಬಹಳ ಮೆಚ್ಚುತ್ತೇನೆ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವೇಗೌಡರು ಹಾಗೂ ಪ್ರಮಾಣ ವಚನ ಸ್ವೀಕಾರದ ವೇಳೆ ಯಡಿಯೂರಪ್ಪ ಅವರ ಅನುಭವ, ಆಶೀರ್ವಾದ ಪಡೆದಿದ್ದಾರೆ. ಹಿರಿಯರಾದ ದೇವೇಗೌಡರ ಆಶೀರ್ವಾದ ಪಡೆದಿದ್ದಾರೆ. ಇದರಲ್ಲಿ ರಾಜಕಾರಣ ಬೆಳೆಸುವುದು ಸರಿಯಲ್ಲ ಎಂದರು.
Advertisement
Advertisement
ಯಡಿಯೂರಪ್ಪ ಅವರು 4 ಬಾರಿ ರಾಜ್ಯದ ಮುಖ್ಯಮಂತ್ರಿ ಆದರೂ ಅವರು ಒಂದಲ್ಲ ಒಂದು ಗೊಂದಲದಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟರು. ಅವರ ಅಧಿಕಾರದ ಅವಧಿಯಲ್ಲಿ ಪೂರ್ಣವಾಗಿ ಒಂದು ಬಾರಿಯೂ ಬಹುಮತ ಬರಲಿಲ್ಲ ಎಂದು ಈಶ್ವರಪ್ಪ ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಮುಂದೆ ‘ವಿಜಯ’ ಪ್ರಸ್ತಾಪದ ಇನ್ಸೈಡ್ ಸ್ಟೋರಿ
Advertisement
Advertisement
ಇನ್ನು ಬೊಮ್ಮಾಯಿ ಅವರು ಆರೇಳು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ಭವಿಷ್ಯವಾಣಿ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ಭವಿಷ್ಯವಾಣಿಗೆ ಉತ್ತರ ಕೊಡುವ ಸಂದರ್ಭ ಯಾವತ್ತು ಬರುವುದಿಲ್ಲ. ಆರೇಳು ತಿಂಗಳಲ್ಲಿ ಬೊಮ್ಮಾಯಿ ಸರ್ಕಾರ ಬಿದ್ದು ಹೋಗಲಿದೆ. ಅಧಿಕಾರ ಕಳೆದುಕೊಳ್ಳುತ್ತಾರೆ. ಎಂಬುದು ಭವಿಷ್ಯ ಹೇಳುವವರಿಗು ಗೊತ್ತಿಲ್ಲ. ಅವರು ಯಾವ ಭ್ರಮೆಯಲ್ಲಿ ಭವಿಷ್ಯ ಹೇಳಿದ್ದಾರೋ ಗೊತ್ತಿಲ್ಲ. ಭವಿಷ್ಯವನ್ನು ಪೂರ್ಣ ತಿರಸ್ಕಾರ ಮಾಡಬೇಕಾ? ಅಥವಾ ಭವಿಷ್ಯ ಪೂರ್ಣ ನಂಬಬೇಕಾ ಅದು ಗೊತ್ತಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಭವಿಷ್ಯ ಹೇಳುತ್ತಾರೆ. ಆದರೆ ಈ ಸರ್ಕಾರ ಇದ್ದೇ ಇರುತ್ತದೆ ಇದರಲ್ಲಿ ಯಾವ ಅನುಮಾನ ಇಲ್ಲ ಎಂದರು. ಇದನ್ನೂ ಓದಿ: ನಾಳೆ ಅಥವಾ ಬುಧವಾರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ: ಕೆ.ಎಸ್.ಈಶ್ವರಪ್ಪ