ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದ್ದಕ್ಕೆ, ಗೆಲವು ಮತ್ತು ಪಕ್ಷಪಾತವಿಲ್ಲದ ತನಿಖೆಗೆ ಇದು ಮೊದಲ ಹೆಜ್ಜೆಯಾಗಿದೆ ಎಂದು ಸುಶಾಂತ್ ಸಿಂಗ್ ಸಹೋದರಿಯರು ದೇವರಿಗೆ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಸುಶಾಂತ್ ಕೇಸ್, ರಿಯಾಗೆ ಹಿನ್ನಡೆ – ಸಿಬಿಐ ತನಿಖೆಗೆ ಅಸ್ತು
There we go!! Finally!! CBI for SSR!! #CBITakesOver
— Shweta Singh Kirti (@shwetasinghkirt) August 19, 2020
Advertisement
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವಂತೆ ಮುಂಬೈ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಮಾಜಿ ಗೆಳತಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೃಷಿಕೇಶ್ ನೇತೃತ್ವದ ಏಕ ಸದಸ್ಯ ಪೀಠ ಅರ್ಜಿ ವಜಾಗೊಳಿಸಿ ಈ ಮಹತ್ವದ ತೀರ್ಪು ನೀಡಿದೆ. ಇದಕ್ಕೆ ಸುಶಾಂತ್ ಸಿಂಗ್ ಸಹೋದರಿಯರು ಸಂತೋಷ ವ್ಯಕ್ತಪಡಿಸಿದ್ದಾರೆ.
Advertisement
Thank you God! You have answered our prayers!! But it is just the beginning… the first step towards the truth! Full faith on CBI!! #Victoryoffaith #GlobalPrayersForSSR #Wearefamily #CBITakesOver
— Shweta Singh Kirti (@shwetasinghkirt) August 19, 2020
Advertisement
“ಕೊನೆಗೂ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಸಿಬಿಐ ಕೈ ಸೇರಿದೆ” ಎಂದು ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಹೇಳಿದ್ದಾರೆ. ಮೊತ್ತೊಂದು ಟ್ವೀಟ್ ಮಾಡಿದ್ದು, “ದೇವರಿಗೆ ಧನ್ಯವಾದಗಳು, ನಮ್ಮ ಪ್ರಾರ್ಥನೆಗೆ ನೀವು ಉತ್ತರಿಸಿದ್ದೀರಿ. ಆದರೆ ಇದು ಕೇವಲ ಪ್ರಾರಂಭ. ಸತ್ಯದ ಕಡೆ ಮೊದಲ ಹೆಜ್ಜೆಯಾಗಿದೆ. ನಮಗೆ ಸಿಬಿಐ ಮೇಲೆ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿದರು.
Advertisement
Congratulations to my extended Family!! So happy… first step towards victory and unbiased investigation. #JusticeforSushantSingRajput #OurfullfaithonCBI
— Shweta Singh Kirti (@shwetasinghkirt) August 19, 2020
ಅಷ್ಟೇ ಅಲ್ಲದೇ “ತುಂಬಾ ಸಂತೋಷವಾಗಿದೆ. ಗೆಲವು ಮತ್ತು ಪಕ್ಷಪಾತವಿಲ್ಲದ ತನಿಖೆಗೆ ಇದು ಮೊದಲ ಹೆಜ್ಜೆಯಾಗಿದೆ” ಎಂದು ತಮ್ಮ ಕುಟುಂಬಕ್ಕೆ ಶ್ವೇತಾ ಸಿಂಗ್ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಮತ್ತೊಬ್ಬ ಸಹೋದರಿ ಮೀತು ಸಿಂಗ್ ಕೂಡ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದ್ದಕ್ಕೆ ಮತ್ತು ಇದಕ್ಕೆ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದ ತಿಳಿಸಿದರು.
https://twitter.com/iaMeetuSingh/status/1295957819255005184
ಈ ಹಿಂದೆಯೇ ಶ್ವೇತಾ ಸಿಂಗ್ ಸಹೋದರ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸೋಶಿಯಲ್ ಮೀಡಿಯಾದ ಮೂಲಕ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಕೈ ಮುಗಿದು ಮನವಿ ಮಾಡಿಕೊಂಡಿದ್ದರು. ಪಕ್ಷಪಾತವಿಲ್ಲದ ತನಿಖೆ ಮಾಡುವಂತೆ ಒತ್ತಾಯಿಸುವುದು ನಮ್ಮ ಹಕ್ಕು ಮತ್ತು ಸತ್ಯ ಹೊರಬರುವುದನ್ನು ಹೊರತುಪಡಿಸಿ ಬೇರೆ ಏನನ್ನೂ ನಾವು ನಿರೀಕ್ಷಿಸುವುದಿಲ್ಲ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದರು.
We stand together as a nation for CBI Enquiry! Demanding an unbiased investigation is our right and we expect nothing but the truth to come out. ???? #CBIForSSR #Warriors4SSR #justiceforSushanthSinghRajput @PMOIndia @narendramodi @AmitShah pic.twitter.com/5WgkaUQybJ
— Shweta Singh Kirti (@shwetasinghkirt) August 13, 2020