ನವದೆಹಲಿ: ಗಣರಾಜ್ಯೋತ್ಸವ ದಿನದಂದು ನಡೆದ ದಾಂಧಲೆ ಪ್ರಕರಣಕ್ಕೆ ರೈತ ಸಂಘಟನೆಗಳನ್ನೇ ನೇರ ಹೊಣೆ ಮಾಡಲು ಕೇಂದ್ರ ಗೃಹ ಸಚಿವಾಲಯ ಮುಂದಾಗುತ್ತಿದ್ದಂತೆ ಎರಡು ಪ್ರಮುಖ ರೈತ ಸಂಘಟನೆಗಳು ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿವೆ.
ನಾನು ಈ ಪ್ರತಿಭಟನೆಯ ನೇತೃತ್ವವನ್ನು ವಹಿಸುವುದಿಲ್ಲ. ಈ ಪ್ರತಿಭಟನೆಯನ್ನು ನಾವು ಹಿಂದಕ್ಕೆ ಸರಿಯುತ್ತೇವೆ ಎಂದು ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆ ಮುಖ್ಯಸ್ಥ ವಿಎಂ ಸಿಂಗ್ ಹೇಳಿದ್ದಾರೆ. ಬೇರೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ನನಗೆ ಏನು ಪಾತ್ರವಿಲ್ಲ ಎಂದು ಅವರು ತಿಳಿಸಿದ್ದಾರೆ.
Advertisement
This is the decision of Rashtriya Kisan Mazdoor Sangathan & not of AIKSCC (All India Kisan Sangharsh Coordination Committee). This is the decision of VM Singh, Rashtriya Kisan Mazdoor Sangathan & all office bearers: VM Singh, National Convener of Rashtriya Kisan Mazdoor Sangathan pic.twitter.com/dTtW45ZMXL
— ANI (@ANI) January 27, 2021
Advertisement
ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಬಾನು ಪ್ರತಾಪ್ ಸಿಂಗ್ ಮಾತನಾಡಿ, ನಿನ್ನೆಯ ಘಟನೆಯಿಂದ ನನಗೆ ಬಹಳ ನೋವಾಗಿದೆ. ಹೀಗಾಗಿ 58 ದಿನಗಳ ಪ್ರತಿಭಟನೆಯನ್ನು ನಾವು ಕೊನೆಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
Advertisement
I have nothing to do with the protest which is being led by them and over here being represented by Rakesh Tikait on their behalf: Sardar VM Singh, Rashtriya Kisan Mazdoor Sangathan https://t.co/CYKZoH9y4y
— ANI (@ANI) January 27, 2021
Advertisement
ಎರಡು ಪ್ರಮುಖ ಸಂಘಟನೆಗಳು ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವ ಮೂಲಕ ರೈತರ ಸಂಘಟನೆಯಲ್ಲಿ ಬಿರುಕು ಮೂಡಿದೆ. ಹೀಗಿದ್ದರೂ ಈಗಾಗಲೇ ಬೆಂಬಲ ನೀಡಿರುವ ಸಂಘಟನೆಗಳು ನಾವು ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಹೇಳಿವೆ.
I am deeply pained by whatever happened in Delhi yesterday and ending our 58-day protest: Thakur Bhanu Pratap Singh, president of Bharatiya Kisan Union (Bhanu) at Chilla border pic.twitter.com/5WNdxM9Iqo
— ANI UP/Uttarakhand (@ANINewsUP) January 27, 2021