ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತೊಂದು ಭೂಕಂಪನಕ್ಕೆ ಸಾಕ್ಷಿಯಾಗಿದೆ. ಸೋಮವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ದೆಹಲಿಯಲ್ಲಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆ ಹೊಂದಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಧೃಡಪಡಿಸಿದೆ.
ದೆಹಲಿ-ಗುರುಗ್ರಾಮ ಗಡಿ ಭೂಕಂಪನದ ಕೇಂದ್ರ ಬಿಂದುವಿದ್ದು, ಭೂಮಿಯ 18 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ತಜ್ಞರು ತಿಳಿಸಿದ್ದಾರೆ. ದೆಹಲಿ-ಎನ್ಸಿಆರ್ ಪ್ರದೇಶವು ಕಳೆದ 2 ತಿಂಗಳುಗಳಲ್ಲಿ 10ಕ್ಕೂ ಹೆಚ್ಚು ಭೂಕಂಪಗಳಿಗೆ ಸಾಕ್ಷಿಯಾಗಿದೆ.
Advertisement
Advertisement
ಬುಧವಾರ ರಾತ್ರಿ ನೋಯ್ಡಾ ಬಳಿ ಮಧ್ಯಮ ತೀವ್ರತೆಯ 3.0 ಭೂಕಂಪ ಸಂಭವಿಸಿತ್ತು. ದೆಹಲಿಯಲ್ಲಿನ ಭೂಕಂಪಗಳ ಸರಣಿಯು ಭವಿಷ್ಯದಲ್ಲಿ ದೊಡ್ಡ ಆಘಾತವನ್ನು ಸೃಷ್ಟಿಸುವ ಕಳವಳವನ್ನು ಹುಟ್ಟುಹಾಕಿದೆ. ಭೂಕಂಪಗಳನ್ನು ತಡೆಯಲು ಸಾಧ್ಯವಿಲ್ಲವಾದರೂ, ಭೂಕಂಪನ ಚಟುವಟಿಕೆಯು ಸಾಮಾನ್ಯ ವಿದ್ಯಮಾನವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.